ನಿವೃತ್ತ ಯೋಧನಿಗೆ ತವರಲ್ಲಿ ಅದ್ದೂರಿ ಸ್ವಾಗತ

blank

ಶನಿವಾರಸಂತೆ: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ಇದೀಗ ಸೇವೆಯಿಂದ ನಿವೃತ್ತಿ ಹೊಂದಿದ್ದ ಯೋಧ ತವರೂರಿಗೆ ಭಾನುವಾರ ಆಗಮಿಸಿದ ಕೆ.ಎಸ್.ಕರುಣಾಕರ್ ಅವರನ್ನು ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಸಾರ್ವಜನಿಕರು ಮತ್ತು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಶನಿವಾರಸಂತೆ ಸಮೀಪದ ಕಿರುಬಿಳಹ ಗ್ರಾಮದವರಾದ ಕೆ.ಎಸ್.ಕರುಣಾಕರ್ 2002ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಗೆ ಸೈನಿಕನಾಗಿ ಆಯ್ಕೆಯಾದರು. ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ ಕರುಣಾಕರ್ ಜು.31 ರಂದು ಸೇವೆಯಿಂದ ನಿವೃತ್ತಗೊಂಡರು. ಒಟ್ಟು 22 ವರ್ಷ ಸೇವೆ ಸಲ್ಲಿಸಿದ ಕರುಣಾಕರ್ ನಿವೃತ್ತಿ ಬಳಿಕ ಗ್ರಾಮಕ್ಕೆ ಆಗಮಿಸುತ್ತಿದ್ದ ಅವರನ್ನು ಗುಡುಗಳಲೆ ಜಂಕ್ಷನ್‌ನಲ್ಲಿ ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಯಿತು. ನಂತರ ಅವರನ್ನು ತೆರದ ವಾಹನದಲ್ಲಿ ಮುಖ್ಯ ರಸ್ತೆ ಮೂಲಕ ಪಟ್ಟಣದ ಕೆಆರ್‌ಸಿ ವೃತ್ತಕ್ಕೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆ ಪ್ರಮುಖರು ಕರುಣಾಕರ್ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.

ನಿವೃತ್ತ ಯೋಧ ಕರುಣಾಕರ್ ಮಾತನಾಡಿ, ರಾಷ್ಟ್ರ ಬಲಿಷ್ಠವಾಗಬೇಕಾದರೆ ಸೇನೆಯೂ ಬಲಿಷ್ಠವಾಗಿರಬೇಕು. ಸೈನಿಕರಿಂದ ದೇಶ ಸುರಕ್ಷತೆ ಹೊಂದುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಲು ಮನಸು ಮಾಡಬೇಕು ಎಂದು ಮನವಿ ಮಾಡಿದರು.
ಸೇನೆಗೆ ಸೇರುವಂತೆ ಪಾಲಕಕರು ತಮ್ಮ ಮಕ್ಕಳಿಗೆ ಹೇಳಿಕೊಡದಿದ್ದರೂ ಅವರಲ್ಲಿ ರಾಷ್ಟ್ರ ಭಕ್ತಿ, ರಾಷ್ಟ್ರ ಸುರಕ್ಷತೆ ಬಗ್ಗೆ ತಿಳಿಸಬೇಕು. ಇದರಿಂದ ಮಕ್ಕಳಲ್ಲಿ ರಾಷ್ಟ್ರಭಿಮಾನ ಮೂಡುತ್ತದೆ. ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದ ಸೇನೆ ಬಲಿಷ್ಠ ವಾಗಿರುವುದು ಹೆಮ್ಮೆಯ ವಿಷಯ ಎಂದರು.

ಇದೇ ವೇಳೆ ಶನಿವಾರಸಂತೆ ಪೊಲೀಸ್‌ಠಾಣಾಧಿಕಾರಿ ಗೋವಿಂದ್ ರಾಜ್ ಪೊಲೀಸ್ ಇಲಾಖೆ ಪರವಾಗಿ ಕರುಣಾಕರ್ ಅವರನ್ನು ಸನ್ಮಾನಿಸಿದರು. ವೇದಿಕೆಯ ಪ್ರಮುಖ ಶುಭಾಷ್, ಪ್ರಮುಖರಾದ ಪುನಿತ್ ತಾಳೂರು, ಶೇಖರ್ ಪೂಜಾರ್, ಬಿಳಹ ದಿನೇಶ್, ಪ್ರಜ್ವಲ್, ಸುನಿಲ್, ಎಸ್.ಎನ್.ರಘು, ಬಿ.ಎಸ್.ಅನಂತ್‌ಕುಮಾರ್, ಕರುಣಾಕರ್ ತಂದೆ ಶಂಕರಪ್ಪ, ತಾಯಿ ಪಾರ್ವತಿ, ಪತ್ನಿ ರೀನಾ ಮುಂತಾದವರಿದ್ದರು.

Share This Article

ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips

ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ…

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…

2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money

Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…