ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಇಂದು

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಆವರಣದಲ್ಲಿ ನವಗ್ರಹ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಡಿ. 28ರಂದು ಬೆಳಗ್ಗೆಯಿಂದ ನಡೆಯಲಿದೆ.

ಬೆಳಗ್ಗೆ 7.30ರಿಂದ ಪುಣ್ಯಾಹವಂ, ಪ್ರತಿಷ್ಠಾ ಹೋಮ, ನವಗ್ರಹಯಾಗ, ಶಿಲಾ ಪ್ರತಿಷ್ಠೆ, ಕಲಶಾಭಿಷೇಕ, ಮಹಾಮಂಗಳಾರತಿ ನಂತರ ಮಧ್ಯಾಹ್ನ ಪ್ರಸಾದ ನಡೆಯಲಿದೆ.

ನವಗ್ರಹ ಮೂರ್ತಿಗೆ ಅಗ್ನಿ ಉತ್ಥಾರಣೆ, ಪ್ರಾರ್ಥನೆ, ಸಂಕಲ್ಪ, ಪುಣ್ಯಾಹವಂ ವಾಸ್ತುಪೂಜೆ, ವಾಸ್ತುಬಲಿ, ಆದಿವಾಸ ಹೋಮ, ಸಪ್ತಾಧಿವಾಸ, ದಿಕ್ಪಾಲಕ ಬಲಿ, ಕಲಶ ಪ್ರತಿಷ್ಠೆ ಮುಂತಾದ ಕಾರ್ಯಕ್ರಮಗಳು ಗುರುವಾರ ಸಂಜೆ ನಡೆದವು ಎಂದು ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿರುವ ಶ್ರೀ ಸುಬ್ರಹ್ಮಣ್ಯ ಭಟ್ಟ ಅವರು ತಿಳಿಸಿದರು.

ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಅಧ್ಯಕ್ಷ ಆನಂದ ಸಂಕೇಶ್ವರ, ಉಪಾಧ್ಯಕ್ಷ ಜಯರಾಮ ಶೆಟ್ಟಿ, ಖಜಾಂಚಿ ಜಿ.ಎಸ್. ಅಯ್ಯರ್, ಆನಂದ ಗುರುಸ್ವಾಮಿ, ಇತರರು ಪಾಲ್ಗೊಂಡಿದ್ದರು.