More

    ನರೋಣಾ ರೈತ ಸಂಪರ್ಕ ಕೇಂದ್ರಕ್ಕೆ ಡಿಸಿ ಹಠಾತ್ ಭೇಟಿ ; ಬೀಜ ಗೊಬ್ಬರ ದಾಸ್ತಾನು ಪರಿಶೀಲನೆ

    ಕಲಬುರಗಿ: ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ ಅವರು ಗುರುವಾರ ಜಿಲ್ಲೆಯ ಆಳಂದ ತಾಲೂಕಿನ ನರೋಣಾ ರೈತ ಸಂಪರ್ಕ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

    ಬೀಜ ವಿತರಣೆ ಹಾಗೂ ಸಂಗ್ರಹಣದ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಮಳೆ ಬಂದರೆ ರೈತರ ಬೇಡಿಕೆಗನುಗುಣವಾಗಿ ಬೀಜದ ಲಭ್ಯತೆ ಕಾಯ್ದುಕೊಳ್ಳುವಂತೆ (ಆರ್ ಎಸ್ ಕೆ) ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರೈತರಿಗೆ ಬೆಳೆ ಸಮೀಕ್ಷೆ ಕುರಿತಾಗಿ ಮಾಹಿತಿ ನೀಡಬೇಕು. ಪ್ರಮುಖವಾಗಿ ಸರ್ಕಾರದಿಂದ ಇರುವ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂದರು.

    ಜಿಲ್ಲಾ ಪಂಚಾಯತ ಸಿಇಓ ಭಂವಾರ ಸಿಂಗ್ ಮೀನಾ, ಆಳಂದ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ
    ಹಾಗೂ ನರೋಣ ಕೃಷಿ ಕೇಂದ್ರದ ಅಧಿಕಾರಿಗಳಾದ ಬಸವರಾಜ್ ಅಟ್ಟೂರ , ರಮೇಶ್ ತೆಲ್ಲೂರ್, ಅಕೌಂಟೆಂಟ್ ಶರಣು ಹಿರೇಗೌಡ್ ಭೈರಾಮಡಗಿ, ಲಕ್ಷ್ಮಿ ಪುತ್ರ, ಶಿವರಾಜ್, ವಿಠ್ಠಲ್ ಸೇರಿದಂತೆ ಮುಂತಾದವರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts