ನರೇಗಲ್ಲನಲ್ಲಿ ನೀರಿಗಾಗಿ ಪ್ರತಿಭಟನೆ

ನರೇಗಲ್ಲ: ಪಟ್ಟಣದ 14 ಮತ್ತು 15ನೇ ವಾರ್ಡ್​ಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಸ್ಥಳೀಯರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಶರಣಪ್ಪ ಧರ್ವಯತ ಮಾತನಾಡಿ, ‘ಪಟ್ಟಣದ ಈಟಿ ಓಣಿ, ಜೊಂಡಿಗೇರಿ ವಾರ್ಡ್​ಗಳಲ್ಲಿ ಕೂಲಿ ಕಾರ್ವಿುಕರೇ ಹೆಚ್ಚಾಗಿದ್ದಾರೆ. ಕೆಲಸಕ್ಕಾಗಿ ನಿತ್ಯವೂ ಹೊರಗೆ ಹೋಗಬೇಕು. ಆದರೆ, ನೀರಿನ ಅಭಾವದಿಂದ ಕೆಲಸ ಬಿಟ್ಟು ನೀರು ತರುವ ಪರಿಸ್ಥಿತಿ ಎದುರಾಗಿದೆ. ನೀರಿಗಾಗಿ ಎಲ್ಲೆಡೆ ಅಲೆದಾಡುವಂತಾಗಿದೆ. ಹಗಲು ರಾತ್ರಿ ನೀರಿಗಾಗಿ ದೂರದಲ್ಲಿನ ಬೋರ್ ವೆಲ್​ಗಳ ಮುಂದೆ ನಿಲ್ಲುವಂತಾಗಿದೆ. ದಿನನಿತ್ಯ ಅಡುಗೆಗೆ, ಬಳಸಲು, ಬಟ್ಟೆ ತೊಳೆಯಲು, ದನಕರುಗಳಿಗೆ ನೀರು ಕುಡಿಸಲು ಕಷ್ಟವಾಗಿದೆ. ಸಮಸ್ಯೆ ಬಗೆಹರಿಸುವಂತೆ ಹಲವಾರು ಬಾರಿ ಪ.ಪಂಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕಾರಣಿಗಳು ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಮನೆ ಮನೆಗೆ ಬರುತ್ತಾರೆ. ಆದರೆ, ಆಯ್ಕೆಯಾದ ನಂತರ ರೈತರ, ಕೂಲಿ ಕಾರ್ವಿುಕರ, ಕೃಷಿಕರ ಸಮಸ್ಯೆಗೆಗಳಿಗೆ ಸ್ಪಂದಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಮನವೊಲಿಸಿದ ಪೊಲೀಸ್ ಸಿಬ್ಬಂದಿ ಪ.ಪಂ ಅಧಿಕಾರಿಗಳೊಂದಿಗೆ ರ್ಚಚಿಸಿದರು. 14 ಮತ್ತು 15ನೇ ವಾರ್ಡ್​ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದರು.

ಕಸ್ತೂರೆವ್ವ ಹಕ್ಕಿ, ಬಸವ್ವ ಹತ್ತಿಕಟಗಿ, ಶರಣವ್ವ ಧರ್ವಯತ, ಮಲ್ಲವ್ವ ಹತ್ತಿಕಟಗಿ, ಸಾವಿತ್ರವ್ವ ಸೋಮಗೊಂಡ, ಚನ್ನಬಸವ್ವ ಹತ್ತಿಕಟಗಿ, ವಿರೂಪಾಕ್ಷಗೌಡ ಲಕ್ಕನಗೌಡ್ರ, ರಮೇಶ ಹತ್ತಿಕಟಗಿ, ಚಂದ್ರು ಹೊನ್ನವಾಡ, ಶರಣಪ್ಪ ಗೊಸಗೋಂಡ, ವೀರಪ್ಪ ಹತ್ತಿಕಟಗಿ, ಬಸವರಾಜ ಕತ್ತಿಶೆಟ್ಟರ್, ಶರಣಪ್ಪ ನವಲಗುಂದ, ಕಲ್ಲಪ್ಪ ಗೊಸಗೊಂಡ ಇತರರಿದ್ದರು.

Leave a Reply

Your email address will not be published. Required fields are marked *