ನರೇಂದ್ರ ಮೋದಿ ಕೈ ಬಲಪಡಿಸಿ


ಸವಣೂರ: ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ ಅವರನ್ನು ಗೆಲ್ಲಿಸಬೇಕು ಎಂದು ಶಿಲ್ಪಾ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಸುಭದ್ರ ರಾಷ್ಟ್ರ ನಿರ್ವಣ, ರೈತ ಪರ ಉತ್ತಮ ನಿರ್ಣಯ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿರುವ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತವಾಗಿದೆ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಸಂಸದರಾಗಿ ಉತ್ತಮ ಕಾರ್ಯ ಕೈಗೊಳ್ಳುತ್ತಿರುವ ಪ್ರಲ್ಹಾದ ಜೋಶಿ ಅವರನ್ನು ಮತ್ತೆ ಆರಿಸಿ ತರಬೇಕು ಎಂದರು.

ಪ್ರಲ್ಲಾದ ಜೋಶಿ ಅವರ ಪತ್ನಿ ಜ್ಯೋತಿ ಜೋಶಿ ಮತಯಾಚಿಸಿದರು. ಪಟ್ಟಣದ ವಡ್ಡರ ಓಣಿ, ಹಾವಣಗಿ ಪ್ಲಾಟ್, ಗೌಡ್ರಓಣಿ, ನವನಗರ ಸೇರಿ ವಿವಿಧೆಡೆ ಪ್ರಚಾರ ಕೈಗೊಂಡರು. ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳಾದ ಶೋಭಾ ನಿಸ್ಸೀಮಗೌಡ್ರ, ಕಮಲಾ ಜೋಶಿ, ಶೋಭಾ ಗಂಜಿಗಟ್ಟಿ, ರೂಪಾ ಬನ್ನಿಕಟ್ಟಿ, ಉಷಾ ಬಿ., ಸ್ಥಳೀಯ ಬಿಜೆಪಿ ಪದಾಧಿಕಾರಿಗಳು, ಪುರಸಭೆ ಸದಸ್ಯರು, ಮಹಿಳಾ ಮುಖಂಡರು, ಕಾರ್ಯಕರ್ತರು, ಇತರರು ಇದ್ದರು.