ಸಿಂಧನೂರು: ಪ್ರೀತಿಸಿ ಮದುವೆಯಾದ 10 ತಿಂಗಳ ಬಳಿಕ ಕೆಳಜಾತಿಗೆ ಸೇರಿದ್ದಾಳೆ ಎಂದು ಗಂಗಾವತಿಯ ನಯನಾ ಎಂಬುವವರನ್ನು ಮನೆಯಿಂದ ಹೊರಹಾಕಿರುವುದು ಖಂಡನೀಯ. ಕೂಡಲೇ ಈ ಪ್ರಕರಣ ದಾಖಲಿಸಿ ನಯನಾಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಉಪತಹಸೀಲ್ದಾರ್ ಚಂದ್ರಶೇಖರಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಿಂಧನೂರಿನ ಗಂಗಾನಗರದ ನಿವಾಸಿ ಸಿದ್ರಾಮಯ್ಯ ಗಂಗಾವತಿಯ ನಯನಾ ಅವರನ್ನು ಪ್ರೀತಿಸಿ ಕುಟುಂಬದ ಸಮಕ್ಷಮದಲ್ಲಿ ಮದುವೆಯಾಗಿ 10 ತಿಂಗಳು ಸಂಸಾರ ನಡೆಸಿದ್ದಾರೆ. ಈಗ ನಯನಾ ಕೆಳ ಜಾತಿಗೆ ಸೇರಿದ್ದಾಳೆ ಎಂದು ಮನೆಯಿಂದ ಹೊರಹಾಕಿರುವ ಸಿದ್ರಾಮಯ್ಯ ತಲೆ ಮರೆಸಿಕೊಂಡಿದ್ದಾರೆ. ನ್ಯಾಯಕ್ಕಾಗಿ ನಯನಾ ಪತಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ನ್ಯಾಯ ಒದಗಿಸಬೇಕೆಂದು ಒತ್ತಾಯಿಸಲಾಯಿತು.