ನಿಪ್ಪಾಣಿ: ನಮ್ಮಲ್ಲಿ ನಂಬಿಕೆ ಇದ್ದರೆ ಯಶಸ್ಸು

ನಿಪ್ಪಾಣಿ: ನಮ್ಮಲ್ಲಿ ನಾವು ನಂಬಿಕೆ ಇಟ್ಟು ಕೆಲಸ ಮಾಡಿದರೆ ಜೀವನದಲ್ಲಿ ಯಶಸ್ಸು ಶತಸಿದ್ಧ ಎಂದು ಯುವ ವಿಜ್ಞಾನಿ ಎಂ.ಎನ್.ಪ್ರತಾಪ್ ಹೇಳಿದರು. ಪಟ್ಟಣದ ವಿ.ಎಸ್.ಎಂ. ಬಿಬಿಎ, ಬಿಸಿಎ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಆಗಮನ 2019 ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಡ ರೈತ ಕುಟುಂಬದಲ್ಲಿ ಹುಟ್ಟಿದ ನಾನು ಚಿಕ್ಕ ವಯಸ್ಸಿನಲ್ಲಿ ದನಕರುಗಳನ್ನು ಕಾಯುತ್ತಿದ್ದೆ. ನನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಎನನ್ನಾದರು ಸಾಸಬೇಕು ಎಂಬ ಛಲದಿಂದ ವಿದ್ಯಾಭ್ಯಾಸ ಆರಂಭಿಸಿದೆ , ಅದು ನನಗೆ ಡ್ರೋಣ ತಯಾರಿಸಲು ಪ್ರೇರೇಪಿಸಿತು. ಡ್ರೋಣದ ಮೂಲಕ ಕೆಲವು ಜೀವಗಳನ್ನು ಉಳಿಸಲು ಸಹಾಯವಾಗಿದ್ದು, ನನ್ನ ಜೀವನ ಸಾರ್ಥಕವಾದಂತಾಗಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು .್ರಾನ್ಸ್‌ನಲ್ಲಿ ನನಗೆ ಉನ್ನತ ಉದ್ಯೋಗ ಸಿಕ್ಕರೂ ನನ್ನ ದೇಶದಲ್ಲಿ ಏನಾದರೂ ಸಾಸಿ , ನಾಡಿಗೆ ಕೊಡುಗೆ ನೀಡಬೇಕು ಎಂದು ದೇಶಕ್ಕೆ ಮರಳಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಬಿ.ಆರ್. ಪಾಟೀಲ, ಚೇರಮನ್ ಚಂದ್ರಕಾಂತ ಕೋಠಿವಾಲೆ, ವಾಯಿಸ್-ಚೇರಮನ್ ಪಪ್ಪು ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿ.ಎಸ್.ಎಂ. ಪ್ರೌಢಶಾಲೆ ವಿದ್ಯಾರ್ಥಿನಿಯರು ಈಶಸ್ತವನ ಹಾಡಿದರು. ಬಿಬಿಎ ವಿದ್ಯಾರ್ಥಿನಿ ಶೃತಿ ಭರತನಾಟ್ಯ, ಉಜ್ವಲಕುಮಾರ ಗಚ್ಚಿ ಭಕ್ತಿಗೀತೆ ಹಾಡಿದರು.

ವಿಜ್ಞಾನಿ ಪ್ರತಾಪ್, ವಿ.ಎಸ್.ಎಂ. ಪದವಿ ಮಹಾವಿದ್ಯಾಲಯದ ಅತ್ಯಾಧುನಿಕ ಭೌತಶಾಸ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷ ಡಾ.ಅಶೋಕ ಪೂಜಾರಿ, ಆನಂದ ಗಿಂಡೆ, ಸಂಚಾಲಕರಾದ ಚಂದ್ರಕಾಂತ ತಾರಳೆ, ಹರಿಶ್ಚಂದ್ರ ಶಾಂಡಗೆ, ಭರತ ಕುರಬೆಟ್ಟಿ, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಸಮೀರ ಬಾಗೇವಾಡಿ, ವಿನಾಯಕ ಢೋಲೆ, ಪ್ರವೀನ ಪಾಟೀಲ, ಸಚಿನ ಹಾಲಪ್ಪನವರ, ಶೇಖರ ಪಾಟೀಲ, ಅವಿನಾಶ ಪಾಟೀಲ, ಗಣೇಶ ಖಡೇದ, ಸುರೇಶ ಕೋಠಿವಾಲೆ, ಸಿಇಓ ಡಾ. ಸಿದ್ಧಗೌಡ ಪಾಟೀಲ, ವಿಎಸ್‌ಎಂಎಸ್‌ಆರ್‌ಕೆಐಟಿ ಪ್ರಾಚಾರ್ಯ ಡಾ.ಪ್ರಕಾಶ ಹುಬ್ಬಳ್ಳಿ , ದೇಶಪಾಂಡೆ ೌಂಡೇಶನ್ ಮ್ಯಾನೇಜರ್ ವಿಶಾಖಾ ಸಿತಾರೆ, ರಾಜಶೇಖರ ಹಿರೆಕೊಡಿ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ದಯಾನಂದ ಕೋಠಿವಾಲೆ, ಪಪೂ ಉಪಪ್ರಾಚಾರ್ಯ ಪಿ.ಜೆ. ನರಕೆ, ಉಪನ್ಯಾಸಕ ಎಂ.ಎನ್.ಮಾದನ್ನವರ, ಎಸ್.ಎಸ್. ಸಮಾಜೆ ಹಾಗೂ ಎಂ.ಎಂ.ಅಪ್ಪಾಜಿಗೋಳ ಇತರರು ಇದ್ದರು.

Leave a Reply

Your email address will not be published. Required fields are marked *