ನನ್ನ ಹೇಳಿಕೆಗೆ ರೋಷನ್ ಬೇಗ್ ಪುಷ್ಟಿ

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ದುರಹಂಕಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪೇಪರ್ ಹುಲಿ ಎಂದು ನಾನು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇನೆ. ಇದೀಗ ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ನನ್ನ ಹೇಳಿಕೆಗೆ ಸಮರ್ಥನೆ ಕೊಟ್ಟಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಕಾಂಗ್ರೆಸ್ ನಾಯಕರ ಬಗ್ಗೆ ರೋಷನ್ ಬೇಗ್ ಹೇಳಿಕೆ ಕುರಿತು ಶಿವಮೊಗ್ಗದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಹಳ ಯೋಚಿಸಿಯೇ ರೋಷನ್ ಬೇಗ್ ಈ ಹೇಳಿಕೆ ನೀಡಿರಬಹುದು. ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ. ಈಗಷ್ಟೇ ಟ್ರೖೆಲರ್ ಬಂದಿದೆ. ಸಿನಿಮಾ ಇನ್ನೂ ಮುಂದಿದೆ ಎಂದು ಮಾರ್ವಿುಕವಾಗಿ ನುಡಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ರೋಷನ್ ಬೇಗ್ ಬಫೂನ್ ಎಂದಿದ್ದಾರೆ. ಸಿದ್ದರಾಮಯ್ಯ ದುರಹಂಕಾರಿ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ದಿನೇಶ್ ಗುಂಡೂರಾವ್ ಬಟ್ಟೆಹಾವು. ಬುಸುಗುಟ್ಟಲೂ ಗೊತ್ತಿಲ್ಲ ಕಚ್ಚಲೂ ಬರುವುದಿಲ್ಲ ಎಂಬ ನನ್ನ ಹೇಳಿಕೆಯನ್ನು ರೋಷನ್ ಬೇಗ್ ಪುಷ್ಟೀಕರಿಸಿದ್ದಾರೆ ಎಂದರು.

Leave a Reply

Your email address will not be published. Required fields are marked *