25.5 C
Bangalore
Monday, December 16, 2019

ನಗರಸಭೆಯಲ್ಲಿ ಲಂಚ‘ಉತಾರ’!

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಮುಸ್ಲಿಂರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ

* ಸಾಮರಸ್ಯಕ್ಕೆ ಮುನ್ನುಡಿ ಬರೆದ ಕಾರ್ಯಕ್ರಮವಿಜಯವಾಣಿ ಸುದ್ದಿಜಾಲ ಬಳ್ಳಾರಿನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ...

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ಗದಗ: ಗದಗ – ಬೆಟಗೇರಿ ನಗರಸಭೆಯಲ್ಲಿ ಆಸ್ತಿ ನೋಂದಣಿ ಮಾಡಿಸಿ ಉತಾರ ಪಡೆಯವುದು ಸದ್ಯದ ಸ್ಥಿತಿಯಲ್ಲಿ ಸುಲಭವೂ ಅಲ್ಲ, ಸರಳವಾಗಿಯೂ ಇಲ್ಲ. ನಗರಸಭೆಯ ಕಂದಾಯ ವಿಭಾಗದಲ್ಲಿ ಕಾಂಚಾಣದ ಸದ್ದಾದರೆ ಮಾತ್ರ ಕೆಲಸ ಸುಲಭವಾಗುತ್ತದೆ ಎಂಬ ದೂರುಗಳು ಕೇಳಿಬರುತ್ತಿವೆ.

- Advertisement -

ಜನರು ತಮ್ಮ ಪ್ರತಿ ಆಸ್ತಿಯನ್ನು ನಗರಸಭೆಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿರುವುದರಿಂದ ಸಿಬ್ಬಂದಿ ಮತ್ತು ಅಧಿಕಾರಿಗಳು ಏಜೆಂಟರ ಮೂಲಕ ದುಡ್ಡು ಹೊಡೆಯುವ ದಂಧೆಯಲ್ಲಿ ಮುಳುಗಿದ್ದಾರೆ. ನಗರಸಭೆ ಕಂದಾಯ ವಿಭಾಗಕ್ಕೆ ನೇರವಾಗಿ ಅರ್ಜಿ ಸಲ್ಲಿಸಿ ಆಸ್ತಿ ಉತಾರಕ್ಕೆ ಕಾದು ಕುಳಿತರೆ ಅರ್ಜಿದಾರನಿಗೆ ಉತಾರ ಸಿಗಲು ಕನಿಷ್ಠ ಆರು ತಿಂಗಳಾದರೂ ಬೇಕು. ಹಣ ಕೊಡದೇ ಆಸ್ತಿ ಉತಾರ ಪಡೆಯುವುದು ಇಲ್ಲಿ ದುಸ್ಸಾಹಸದ ಕೆಲಸ. ಹಣ ಕೊಡುವುದಿಲ್ಲ ಎಂಬುದು ಖಚಿತವಾದರೆ ಸಂಬಂಧಿಸಿದ ಅರ್ಜಿದಾರನ ಅರ್ಜಿಯನ್ನು ಹಳೆಯ ಕಡಿತಗಳಲ್ಲಿ ಸೇರಿಸಿ, ‘ನಿಮ್ಮ ಅರ್ಜಿ ಕಳೆದುಹೋಗಿದೆ ಇಲ್ಲವೇ ಸಿಗುತ್ತಿಲ್ಲ’ ಎಂಬ ಸಬೂಬು ನೀಡಿ ಅಲೆದಾಡಿಸಲಾಗುತ್ತದೆ. ಇದರಿಂದ ಬೇಸತ್ತ ಅರ್ಜಿದಾರ ಅನಿವಾರ್ಯವಾಗಿ ಹಣ ನೀಡಿ ಉತಾರ ಪಡೆಯಬೇಕಾಗಿದೆ.

ಹೊಸ ಅರ್ಜಿದಾರರ ಆಸ್ತಿಗೆ ಸಂಬಂಧಿಸಿದಂತೆ ಅವರ ಖಾತೆ ನಗರಸಭೆಯಲ್ಲಿ ದಾಖಲು ಇದ್ದರೆ 7 ದಿನಗಳೊಳಗೆ ಉತಾರ ನೀಡಬೇಕು. ನಗರಸಭೆಯಲ್ಲಿ ಆಸ್ತಿ ದಾಖಲು ಹಾಗೂ ವರ್ಗಾವಣೆ ಇದ್ದರೆ 45 ದಿನಗಳಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಉತಾರ ನೀಡಬೇಕು ಎಂಬ ಕಾನೂನು ಇದೆ. ಆದರೆ, ಹಣ ಕೊಟ್ಟರೆ ಮಾತ್ರ ಇಲ್ಲಿ ಬೇಗನೆ ಕೆಲಸ ಆಗುತ್ತದೆ. ಹಣ ಕೊಡದಿದ್ದರೆ ವರ್ಷಗಟ್ಟಲೇ ಕಾಯಬೇಕಾದ ಸ್ಥಿತಿ ಇಲ್ಲಿದೆ.

ಅರ್ಜಿ ಸಲ್ಲಿಕೆ ವಿಧಾನ

ಅರ್ಜಿದಾರ ಸಂಬಂಧಿಸಿದ ಆಸ್ತಿಯ ದಾಖಲೆ ಸಮೇತ ಅರ್ಜಿಯನ್ನು ನಗರಸಭೆ ನಾಗರಿಕ ಸೇವಾ ಕೇಂದ್ರಕ್ಕೆ ಸಲ್ಲಿಸಬೇಕು. ನಂತರ ಅರ್ಜಿ ಕಂದಾಯ ವಿಭಾಗಕ್ಕೆ ವರ್ಗಾವಣೆಯಾಗುತ್ತದೆ. ಕಂದಾಯ ವಿಭಾಗದ ಸಿಪಾಯಿ ಆಯಾ ವಾರ್ಡ್​ಗಳ ಸಿಬ್ಬಂದಿಗೆ (ಕೇಸ್ ವರ್ಕರ್) ವರ್ಗಾಯಿಸುತ್ತಾರೆ. ಅನಂತರ ಕರ ವಸೂಲಿದಾರ ಈ ಅರ್ಜಿಗೆ ಟಿಪ್ಪಣೆ ಬರೆದು ನಂತರ ಪಿಐಡಿ (ಪ್ರಾಪರ್ಟಿ ಐಡಿ ನಂಬರ್) ನೀಡಿದ ನಂತರ ಸರ್ವೆ ವಿಭಾಗಕ್ಕೆ ರವಾನೆ ಮಾಡಲಾಗುತ್ತದೆ. ಕಂದಾಯ ನಿರೀಕ್ಷಕ, ಕಂದಾಯ ಅಧಿಕಾರಿ ಪರಿಶೀಲನೆ ನಂತರ ಪೌರಾಯುಕ್ತರ ಸಹಿ ಬೀಳುತ್ತದೆ. ಈ ಮಧ್ಯದಲ್ಲಿ ಒಬ್ಬ ಸಿಬ್ಬಂದಿ ಅಥವಾ ಅಧಿಕಾರಿ ಇಲ್ಲದಿದ್ದರೆ ಕಡತ ಅಲ್ಲೇ ತಟಸ್ಥವಾಗಿ ಉಳಿಯುತ್ತದೆ. ಕೆಲ ದಿನಗಳ ನಂತರ ಅರ್ಜಿದಾರ ಉತಾರ ಕುರಿತು ವಿಚಾರಿಸಿದರೆ, ಸಿಬ್ಬಂದಿಯ ತಪ್ಪಿದ್ದರೂ ಅರ್ಜಿದಾರ ಮೇಲೆ ದೂರಲಾಗುತ್ತಿದೆ. ನೀವು ನೀಡಿದ ಅರ್ಜಿ ಜತೆಗೆ ಲಗತ್ತಿಸಿದ ದಾಖಲೆಗಳು ಕಾಣಿಯಾಗಿವೆ ಎಂಬ ಕಾರಣ ನೀಡಿ ಅರ್ಜಿದಾರರನ್ನು ಯಾಮಾರಿಸಲಾಗುತ್ತದೆ ಎಂಬ ದೂರುಗಳಿವೆ.

ಆಸ್ತಿ ಉತಾರಕ್ಕಾಗಿ ಮಧ್ಯವರ್ತಿಗಳ ಮೂಲಕ ಬರುವ ಅರ್ಜಿಗಳನ್ನು ಬೇಗನೆ ವಿಲೇವಾರಿ ಮಾಡಲಾಗುತ್ತದೆ. ಉತಾರ ಕೊಡಿಸಲು ಇಂತಿಷ್ಟು ಹಣ ಫಿಕ್ಸ್ ಮಾಡಿಕೊಂಡು ಏಜೆಂಟರು ಕಾರ್ಯಾಚರಣೆ ಆರಂಭಿಸುತ್ತಾರೆ. ಅರ್ಜಿದಾರನಿಂದ ಪಡೆದ ಹಣದಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸಂದಾಯವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಶಾಸಕರ ಉದ್ದೇಶ ವಿಫಲ

ಆಸ್ತಿ ಉತಾರ ಪಡೆಯುವ ವಿಷಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಾಸಕ ಎಚ್.ಕೆ. ಪಾಟೀಲ ಅವರು ನಗರಸಭೆಯಲ್ಲಿ ನಾಗರಿಕ ಸೇವಾ ಕೇಂದ್ರ ಆರಂಭಿಸಿದರು. ಜನರಿಗೆ ನಿಗದಿತ ಅವಧಿಯಲ್ಲಿ ಆಸ್ತಿ ಉತಾರ ಸಿಗಬೇಕು ಎಂಬ ಉದ್ದೇಶದಿಂದ ಸೇವಾ ಕೇಂದ್ರ ಶುರು ಮಾಡಲಾಯಿತು. ಆದರೆ, ಈ ಸೇವಾ ಕೇಂದ್ರದಲ್ಲಿ ಸಹ ಏಜೆಂಟರ ಹಾವಳಿ ಮುಂದುವರಿದಿದೆ. ಕೇವಲ ಅರ್ಜಿ ಸ್ವೀಕರಿಸಲು ಸೇವಾ ಕೇಂದ್ರ ಸೀಮಿತಗೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ.

ಅಮಾನತಿಗೆ ಶಾಸಕರ ಶಿಫಾರಸು?

ನಗರಸಭೆ ಕಂದಾಯ ವಿಭಾಗದಲ್ಲಿ ಆಸ್ತಿಗಳ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಯನ್ನು ಶಾಸಕರು ಅಮಾನತು ಮಾಡಲು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದರು. ಶಿಫಾರಸು ಏನಾಯಿತೋ ಗೊತ್ತಿಲ್ಲ.

ಪಿಐಡಿ ಉತಾರ

ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಜನರು ತಮ್ಮ ಮನೆ, ನಿವೇಶನಗಳಿಗೆ ನಗರಸಭೆಯ ಪಿಐಡಿ (ಪ್ರಾಪರ್ಟಿ ಐಡಿ ನಂಬರ್) ಉತಾರ ಪಡೆಯಬೇಕು. ಪಿಐಡಿ ಇಲ್ಲದೆ ಮನೆ, ನಿವೇಶನ ಮತ್ತು ಲೇಔಟ್​ಗಳನ್ನು ಸಬ್ ರಜಿಸ್ಟ್ರಾರ್ ನೋಂದಣಿ ಮಾಡುವುದಿಲ್ಲ. ನೋಂದಣಿಯಾಗದೇ ಆಸ್ತಿಗಳನ್ನು ಮಾರಾಟ ಮಾಡಲು ಬರುವುದಿಲ್ಲ. ಪಿಐಡಿ ಇಲ್ಲದ ಆಸ್ತಿಗಳಿಗೆ ಬ್ಯಾಂಕ್ ಸಾಲ ಸಹ ಸಿಗುವುದಿಲ್ಲ. ಹೀಗಾಗಿ ಪಿಐಡಿ ಉತಾರಕ್ಕಾಗಿ ನಗರಸಭೆಗೆ ಅರ್ಜಿ ಸಲ್ಲಿಸುತ್ತಾರೆ. ಪ್ರತಿ ತಿಂಗಳು 300ರಿಂದ 500 ಅರ್ಜಿ ಸಲ್ಲಿಕೆಯಾಗುತ್ತವೆ. ಇದರಲ್ಲಿ ಅರ್ಧದಷ್ಟು ವಿಲೇವಾರಿ ಮಾಡಲಾಗುತ್ತದೆ. ಜೂನ್, ಜುಲೈನಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಇನ್ನೂ 200 ಅರ್ಜಿಗಳು ವಿಲೇವಾರಿ ಆಗಬೇಕಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಕಂದಾಯ ವಿಭಾಗದಲ್ಲಿ ಆಸ್ತಿ ನೋಂದಣಿಗೆ ಹಣ ವಸೂಲಿ ಮಾಡುವಂತಹ ವಾತಾವರಣ ಸದ್ಯಕ್ಕೆ ಇಲ್ಲ. ನಾಗರಿಕ ಸೇವಾ ಕೇಂದ್ರ ಆರಂಭವಾದ ನಂತರ ಕಡಿಮೆ ಆಗಿದೆ. ಏಜೆಂಟರ ಹಾವಳಿ ಮುಂದುವರಿದಿದ್ದರೆ ನಾನೇ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ.

ಮನ್ಸೂರ ಅಲಿ, ನಗರಸಭೆ ಪೌರಾಯುಕ್ತ

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...