ಚಿತ್ರದುರ್ಗ: ಪ್ರತಿ ವರ್ಷ ಶ್ರಾವಣ ಮಾಸದ ನೂಲ ಹುಣ್ಣಿಮೆಯ ದಿನದಂದು ಬರುವ ರಕ್ಷಾ ಬಂಧನ ಹಬ್ಬವನ್ನು ಕೋಟೆನಗರಿ ಸೇರಿ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಭ್ರಮದೊಂದಿಗೆ ವಿಶೇಷವಾಗಿ ಆಚರಿಸಲಾಯಿತು.
ಪರಸ್ಪರ ಪ್ರೀತಿ, ಕಾಳಜಿ, ಜವಾಬ್ದಾರಿ, ಸಂಬಂಧ ಗಟ್ಟಿಗೊಳಿಸುವ ಈ ಹಬ್ಬದಲ್ಲಿ ಸಹೋದರಿಯರು ಸಹೋದರರನ್ನು ಮನೆಯ ದೇವರ ಮುಂಭಾಗ ಕೂರಿಸಿ ತಿಲಕವಿಟ್ಟು, ಆರತಿ ಬೆಳಗಿದ ನಂತರ ರಾಖಿ ಕಟ್ಟಿದರು. ಅನೇಕರು ಉಡುಗೊರೆಯನ್ನು ಕೂಡ ಪಡೆದುಕೊಂಡರು.
ಸಹೋದರನಿಗೆ ಏಳ್ಗೆಯಾಗಬೇಕು. ಅವರ ಇಷ್ಟಾರ್ಥಗಳೆಲ್ಲವನ್ನು ದೇವರು ದಯಪಾಲಿಸಬೇಕು ಎಂದು ಪ್ರಾರ್ಥಿಸಿಕೊಂಡರು. ನಗರದ ಅನುಪಮಾ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್, ಪಾರ್ಶ್ವನಾಥ ವಿದ್ಯಾಸಂಸ್ಥೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಾಸವಿ ವಿದ್ಯಾಸಂಸ್ಥೆ ಸೇರಿ ವಿವಿಧ ಸಂಘ-ಸಂಸ್ಥೆಗಳಿಂದ ರಕ್ಷಾ ಬಂಧನ ಆಚರಿಸಲಾಯಿತು.