ನಗರದ ವಿವಿಧೆಡೆ ಗಾಂಜಾ ಮಾರಾಟ: ಬಂಧನ
ಬೆಳಗಾವಿ: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತಿದ್ದ ಸ್ಥಳಗಳ ಮೇಲೆ ನಗರ ಪೊಲೀಸರು ದಾಳಿ ನಡೆಸಿ ಒಟ್ಟು 694 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ನಗರದ ಶೌರ್ಯ ಸರ್ಕಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಕ್ಯಾಂಪ ಲ್ ಪೊಲೀಸರು ವಶಕ್ಕೆ ಪಡಿಸಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಅಂಬೇವಾಡಿ ಗ್ರಾಮದ ನವೀನ ಗಲ್ಲಿಯ ನಿವಾಸಿ ಕಿರಣ ಗುಂಡು ಆದವ( 21), ಶಿನ್ನೊಳ್ಳಿ ಗ್ರಾಮದ ರಾಹುಲ್ ಆರೋಪಿತರು.
ದಾಳಿ ವೇಳೆ ಒಟ್ಡು 2 ಸಾವಿರ ಮೊತ್ತದ 200 ಗ್ರಾಂ ಗಾಂಜಾ ವಶ ಪಡೆಸಿಕೊಳ್ಳಲಾಗಿದೆ.ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದಲ್ಲಿ ನಡೆದ ಇನ್ನೊಂದು ಅಕ್ರಮ ಗಾಂಜಾ ಮಾರಾಟದ ಪ್ರಕರಣದಲ್ಲಿ ನಗರದ ಗೋಡ್ಸೆವಾಡಿ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ,25180 ರೂ ಮೌಲ್ಯದ 494 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಅಯೋದ್ಯ ನಗರದ ನಿವಾಸಿ ವಿನಾಯಕ ಪ್ರಕಾಶ ಕೊಲ್ಲಾಪುರೆ,(29), ಸಂದೇಶ ಶೀತಲ ಗವಾಲಿ(24),ಭವಾನಿ ನಗರದ ನಿವಾಸಿ ಕುಮಾರ ಗೋವಿಂದ ಪೂಜೇರಿ( 39), ರೋಹಿತ ಶಂಕರ ಮುಳವೆ( 30) ,ಸೌರಭ ಶ್ರೀಧರ ಸಾತುಸಕರ ಬಂಧಿತ ಆರೋಪಿಗಳು.
ಬಂಧಿತರಿಂದ ದಾಳಿ ವೇಳೆ ಒಟ್ಟು 25180 ರೂ ಮೌಲ್ಯದ 494 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.