ನಗರದಲ್ಲಿ ‘ಸಸ್ಯಾಹಾರಕ್ಕಾಗಿ 2ಕೆ’ ಓಟ


ಮೈಸೂರು: ಸಸ್ಯಹಾರದ ಬಗ್ಗೆ ಜಾಗೃತಿ ಮೂಡಿಸಲು ಪಿರಮಿಡ್ ಸ್ಪಿರಿಚುಯಲ್ ಸೊಸೈಟೀಸ್ ಮೂವ್‌ಮೆಂಟ್ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ‘ಸಸ್ಯಾಹಾರಕ್ಕಾಗಿ 2ಕೆ’ ಓಟ ಆಯೋಜಿಸಲಾಗಿತ್ತು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆರಂಭಗೊಂಡ ಓಟ, ಹಾರ್ಡಿಂಜ್ ವೃತ್ತ, ಗ್ರಾಮಾಂತರ ಬಸ್ ನಿಲ್ದಾಣ, ಅಶೋಕ ರಸ್ತೆ ಮೂಲಕ ಮತ್ತೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಅಂತ್ಯಗೊಂಡಿತು.

ಓಟಕ್ಕೆ ಚಾಲನೆ ನೀಡಿದ ಜೈನ ಮುನಿ ಅಜಿತ್ ಚಂದ್ರ ಸಾಗರ್ ಮಾತನಾಡಿ, ಹಿಂಸೆ, ಪರಮಾಣು ಶಸ್ತ್ರಗಳ ಬಳಕೆಯಿಂದ ವಿಶ್ವ ವಿನಾಶದಂಚಿಗೆ ಹೋಗುತ್ತಿದೆ. ವಿಶ್ವ ಕಾಪಾಡಲು ಮಹಾವೀರರ ಮಾರ್ಗ ಅನುಸರಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಸಸ್ಯಾಹಾರ ಸೇವಿಸಿ, ಪ್ರಾಣಿ ಸಂಕುಲ ಉಳಿಸಿ. ಮಾಂಸಾಹಾರ ತ್ಯಜಿಸಿ. ಪ್ರಾಣಿ ಸಂಕುಲಕ್ಕೆ ನಮ್ಮಂತೆಯೇ ಬದುಕುವ ಹಕ್ಕಿದೆ. ಇದು ನಾಶವಾದರೆ ಮಾನವ ಸಂಕುಲದ ಮೇಲೆ ಪರಿಣಾಮ ಬೀರಲಿದೆ.ಹೀಗಾಗಿ ಎಲ್ಲರೂ ಸಸ್ಯಾಹಾರವನ್ನೇ ಅನುಸರಿಸಬೇಕು ಎಂಬ ಸಂದೇಶ ಸಾರಲಾಯಿತು.

ಪಿಎಸ್‌ಎಸ್‌ಎಂ ಸಂಸ್ಥಾಪಕಿ ದಿವ್ಯಾ ಶ್ರೀನಿವಾಸ್, ಮೈಸೂರು ಶಾಖೆಯ ಬಿ.ಚೆನ್ನಬಸವ, ಧ್ಯಾನಾ ಪ್ರಚಾರ ಟ್ರಸ್ಟ್‌ನ ಕೆ.ವರಾಹಮೂರ್ತಿ, ಆಧ್ಯಾತ್ಮ ಚಿಂತಕ ಕೆ.ಆರ್.ವಸಂತಕುಮಾರ್, ಚೇತನ್‌ರಾಮ್ ಇತರರು ಇದ್ದರು.

Leave a Reply

Your email address will not be published. Required fields are marked *