ಕುಣಿಗಲ್: ಕೆನರಾ ಬ್ಯಾಂಕ್ ನಕಲಿ ರಬ್ಬರ್ ಸ್ಟಾಂಪ್ ಬಳಸಿ ಕುಣಿಗಲ್ ಪುರಸಭೆ ಆಸ್ತಿ ತೆರಿಗೆ ಪಾವತಿ ಮಾಡಲಾಗಿದೆ ಎಂದು ನಂಬಿಸಿ ಲಾಂತರ ರೂಪಾಯಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯವರ್ತಿ ಉಪ್ಪಾರ ಬೀದಿ ನಿವಾಸಿ ಕೃಷ್ಣ ಅಲಿಯಾಸ್ ಕಿಟ್ಟಿ ಎಂಬಾತ ನೂರಾರು ಜನರ ತೆರಿಗೆ ವಾವತಿಸುವುದಾಗಿ ಆಸ್ತಿ ಮಾಲೀಕರಿಂದ ಹಣ ಪಡೆದು ನಕಲಿ ಸೀಲ್ ಬಳಸಿದ ಚಲನ್ ಕೊಟ್ಟು ವಂಚಿಸಿರುವುದುನ್ನು ತಡವಾಗಿ ತಿಳಿದುಕೊಂಡು ಪುರಸಭೆ ಮುಖ್ಯಾಧಿಕಾರಿ, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪುರಸಭೆ ಕಚೇರಿ ಸಿಬ್ಬಂದಿ ಚಲನ್ನಲ್ಲಿ ನಮೂದಾಗಿರುವ ಬ್ಯಾಂಕ್ ಸೀಲ್ ಅಸ್ಪಷ್ಟವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ಗಮನಿಸಿ, ನಕಲಿ ಇರಬಹುದೆಂದು ಅನುಮಾನಗೊಂಡು ಪುರಸಭೆ ಮುಖ್ಯಾ-ಕಾರಿ ಜಿ. ಮಂಜುಳಾ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಕೆನರಾ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪುರಸಭೆಗೆ ಬಂದ ನಕಲಿ ಚಲನ್ ಒಂದರಲ್ಲಿಯೇ 42,072 ರೂ. ವಂಚಿಸಲಾಗಿದ್ದು, ಇನ್ನೂ ನೂರಾರು ನಕಲಿ ಚಲನ್ ಮೂಲಕ ಪುರಸಭೆಗೆ ಲಾಂತರ ರೂ. ವಂಚಿಸಲಾಗಿದೆ ಎನ್ನಲಾಗಿದೆ.
ಆಸ್ತಿ ಮಾಲೀಕ ನಾಗರಾಜು ಅವರನ್ನು ಕಚೇರಿಗೆ ಕರೆಸಿಕೊಂಡು ವಿಚಾರಿಸಿದಾದ ಅವರು ಪುರಸಭೆಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುವ ಕೃಷ್ಣ ಎಂಬುವವನಿಗೆ ಹಣಕೊಟ್ಟು ಬ್ಯಾಂಕ್ನಲ್ಲಿ ಪಾವತಿಸಲು ತಿಳಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಆರೋಪಿ ಕೃಷ್ಣನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
