ನಂಬಿ ಬಯೋಪಿಕ್​ನಲ್ಲಿ ಶಾರುಖ್-ಸೂರ್ಯ

ಇಸ್ರೋ ವಿಜ್ಞಾನಿ, ಪದ್ಮಭೂಷಣ ಪುರಸ್ಕೃತ ನಂಬಿ ನಾರಾಯಣನ್ ಜೀವನ ಕುರಿತ ‘ರಾಕೆಟ್ರಿ; ದಿ ನಂಬಿ ಎಫೆಕ್ಟ್’ ಸಿನಿಮಾ ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ವಣವಾಗುತ್ತಿದೆ. ಆರ್. ಮಾಧವನ್ ಮುಖ್ಯಭೂಮಿಕೆ ನಿಭಾಯಿಸುವುದರ ಜತೆಗೆ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದೀಗ ಈ ಬಯೋಪಿಕ್​ಗೆ ಇಬ್ಬರು ಸ್ಟಾರ್ ನಟರ ಆಗಮನವಾಗಿದೆ. ಬಾಲಿವುಡ್

ಬಾದ್​ಷಾ ಶಾರುಖ್ ಖಾನ್ ಮತ್ತು ಕಾಲಿವುಡ್ ನಟ ಸೂರ್ಯ ನಟಿಸುವುದು ಪಕ್ಕಾ ಆಗಿದೆ. ಇಸ್ರೋದಲ್ಲಿದ್ದಾಗ ನಂಬಿ ನಾರಾಯಣನ್ ವಿರುದ್ಧ ಬೇಹುಗಾರಿಕೆ ಆರೋಪ ಕೇಳಿಬಂದಿತ್ತು. ಬಳಿಕ ಸುಪ್ರೀಂಕೋರ್ಟ್ ಅವರ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ಕ್ಲೀನ್ ಚೀಟ್ ನೀಡಿತ್ತು. ಅಷ್ಟಕ್ಕೂ ಬೇಹುಗಾರಿಕೆ ಹಿಂದಿನ ಕಥೆ ಏನು? ನಂಬಿ ನಾರಾಯಣನ್ ಆರೋಪಿ ಅಲ್ಲ ಎಂಬುದನ್ನು ಹೇಗೆ ಸಾಬೀತು ಪಡಿಸಿದರು? ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಮಾಧವನ್ ಸಿನಿಮಾ ಮಾಡುತ್ತಿದ್ದಾರೆ. ಲುಕ್ ಮೂಲಕವೇ ಚಿತ್ರದ ಬಗ್ಗೆ ಕುತೂಹಲ ಸೃಷ್ಟಿಯಾಗಿತ್ತು. ಈಗ ಚಿತ್ರತಂಡಕ್ಕೆ ಶಾರುಖ್ ಖಾನ್ ಮತ್ತು ಸೂರ್ಯ ಆಗಮಿಸಿರುವುದು ಮತ್ತಷ್ಟು ಮೈಲೇಜ್ ಸಿಕ್ಕಂತಾಗಿದೆ. ಜೂನ್ ವೇಳೆಗೆ ಸಿನಿಮಾ ತೆರೆಕಾಣಲಿದೆಯಂತೆ. -ಏಜೆನ್ಸೀಸ್