ಧಾರ್ವಿುಕ ಚಿಂತನೆಯಿಂದ ಮಾನವನ ಅಭಿವೃದ್ಧಿ

ಭಟ್ಕಳ: ಧಾರ್ವಿುಕ ಚಿಂತನೆ ನಡೆಸುವುದರಿಂದ ಮಾನವನ ಅಭಿವೃದ್ಧಿಯಾಗುತ್ತದೆ. ಮನುಷ್ಯರಾಗಿ ಹುಟ್ಟಿದ ಮೇಲೆ ಎಲ್ಲರೂ ಸುಖದಿಂದ ಇರಬೇಕು ಎಂದು ಬಯಸುತ್ತೇವೆ. ಸುಖವನ್ನು ನಾವು ಬಾಹ್ಯ ಇಂದ್ರಿಯಗಳಲ್ಲಿ ಪಡೆಯ ಬಯಸುತ್ತಿದ್ದೇವೆ ಎಂದು ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಜಾಲಿಯ ಶ್ರೀ ವೆಂಕಟೇಶ್ವರ ನಾಮಧಾರಿ ವಿದ್ಯಾವರ್ಧಕ ಸಂಘದ ನೂತನ ಸಭಾಭವನವನ್ನು ಸೋಮವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಅಂತರ ಇಂದ್ರಿಯಗಳಿಂದ ಸುಖದ ಅನುಭವ ಪಡೆಯಬೇಕು. ಧಾರ್ವಿುಕ ಆಚರಣೆ ಮರೆಯಬಾರದು. ಜಾಲಿ ಭಾಗದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಸಂಘ ಕಟ್ಟಿಕೊಂಡು ಈ ಸಭಾಭವನ ಲೋಕಾರ್ಪಣೆಗೊಳಿಸಿದ್ದು ಮಹ ತ್ಕಾರ್ಯ. ಶರೀರ ಬಿದ್ದುಹೋಗುವ ಮುನ್ನ ಲೋಕಕಲ್ಯಾಣಕ್ಕಾಗಿ ಉಪಯೋಗಿಸಬೇಕು. ಜಾತಿಯ ಹಂಗು ಇಲ್ಲದೆ ಎಲ್ಲರೂ ಈ ಸಭಾಭವನವನ್ನು ಲೋಕಕಲ್ಯಾಣಕ್ಕಾಗಿ ಉಪಯೋಗಿಸಬೇಕು ಎಂದರು.

ಶಾಸಕ ಸುನೀಲ ನಾಯ್ಕ ಮಾತನಾಡಿ, ಇಲ್ಲಿನ ಯುವಕರ 40 ವರ್ಷಗಳ ಹಿಂದಿನ ಸಂಕಲ್ಪ ಇಂದು ನನಸಾಗಿದೆ. ಮುಂದೆಯೂ ಯುವಕರು ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿ ಇತರರಿಗೆ ಮಾದರಿಯಾಗಲಿ ಎಂದು ಆಶಿಸಿದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಎಂ.ಎಂ. ನಾಯ್ಕ, ಡಿ.ಬಿ.ನಾಯ್ಕ, ಮಾತನಾಡಿದರು. ಶ್ರೀರಾಮ ಕ್ಷೇತ್ರದ ಟ್ರಸ್ಟಿ ಬಾಬು ಮಾಸ್ತರ, ತಾಪಂ ಸದಸ್ಯ ಮಹಾಬಲೇಶ್ವರ ನಾಯ್ಕ, ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷ ಎಂ.ಆರ್. ನಾಯ್ಕ, ಪಪಂ ಸದಸ್ಯೆ ಲಕ್ಷ್ಮೀ ನಾಯ್ಕ, ಪ್ರಮುಖರಾದ ಗಣಪತಿ ನಾಯ್ಕ ಜಾಲಿ, ಮಂಜಪ್ಪ ನಾಯ್ಕ, ನಾಗರಾಜ ನಾಯ್ಕ, ಶಾಂತಾರಾಮ ನಾಯ್ಕ ಇತರರು ಇದ್ದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಭಾಭವನದ ಕಾರ್ಯಗಳಲ್ಲಿ ತೊಡಗಿದ ಗಣ್ಯರನ್ನು ಸನ್ಮಾನಿಸಲಾಯಿತು. ಮಾಧವ ಡಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ನಾಯ್ಕ, ಶಿಕ್ಷಕ ನಾರಾಯಣ ನಾಯ್ಕ, ಮಹಾದೇವ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸ್ವಾಮೀಜಿಗಳನ್ನು ಬೈಕ್ ರ್ಯಾಲಿಯ ಮೂಲಕ ಪೂರ್ಣಕುಂಭದೊಂದಿಗೆ ಸಭಾಭವನಕ್ಕೆ ಕರೆ ತರಲಾಯಿತು.