‘ಧಾರವಾಡ ಪಂಚಾಂಗ’ದಲ್ಲಿ ಜಲಪ್ರಳಯದ ಉಲ್ಲೇಖ

ಧಾರವಾಡ: ಕೇರಳದಲ್ಲಿ ಉಂಟಾಗಿರುವ ಜಲಪ್ರಳಯದ ಬಗ್ಗೆ ‘ಧಾರವಾಡ ಪಂಚಾಂಗಮ್​ದಲ್ಲಿ ಮುಂಚಿತವಾಗಿಯೇ ಉಲ್ಲೇಖ ಮಾಡಿರುವುದು ಬೆಳಕಿಗೆ ಬಂದಿದೆ.

ನಗರದ ಶ್ರೀ ರಾಜೇಶ್ವರ ಶಾಸ್ತ್ರಿಗಳ ಸಮ್ಮುಖದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಿಂದ ಪ್ರಕಾಶಿತ 2018- 19ರ ಪಂಚಾಂಗದಲ್ಲಿ ಜಲಪ್ರಳಯದ ಬಗ್ಗೆ ನಮೂದಿಸಲಾಗಿದೆ. ಪ್ರತಿವರ್ಷ ಯುಗಾದಿ ಹಬ್ಬಕ್ಕೆ ಲೋಕಾರ್ಪಣೆಗೊಳ್ಳುವ ಪಂಚಾಂಗದಲ್ಲಿ ಉಲ್ಲೇಖಗೊಂಡಂತೆ ಕೇರದಲ್ಲಿ ಜಲಪ್ರಳಯ ಉಂಟಾಗಿರುವುದು ತರ್ಕಕ್ಕೆ ಕಾರಣವಾಗಿದೆ.

ಭಾರತದ ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳಲ್ಲಿ ಜಲಪ್ರಳಯವಾಗುವ ಸಂಭವವಿದೆ ಎಂದು ಪಂಚಾಂಗದಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ ಕೇರಳದಲ್ಲಿ ಅಪಾರ ಪ್ರಮಾಣದ ಹಾನಿ ಆಗಿದೆ. ರಾಜ್ಯದಲ್ಲಿ ರಾಜಕೀಯ ಕ್ಷಿಪ್ರ ಬೆಳವಣಿಗೆಯಾಗಲಿದ್ದು, ಧರ್ಮ, ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಪಕ್ಷಗಳಿಗೆ ಜಯ ಸಾಧ್ಯ. ದುರಾಡಳಿತ ಮತ್ತು ಸ್ವೇಚ್ಛಾಚಾರ ನಡೆಸುವ ಪಕ್ಷಗಳಿಗೆ ಜನ ಬೆಂಬಲವಿಲ್ಲ ಎಂದು ಉಲ್ಲೇಖ ಮಾಡಲಾಗಿದೆ. ಪೂರ್ವಾರ್ಧದಲ್ಲಿ ಮುಖ್ಯ ರಾಜಕಾರಣಿಯ ಅಧಿಕಾರ ತ್ಯಾಗ ಸಾಧ್ಯ. ಕರ್ನಾಟಕದ ಪ್ರಸಿದ್ಧ ರಾಜಕೀಯ ವ್ಯಕ್ತಿ ಕಣ್ಮರೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಸ್ವಲ್ಪ ತೂಕ ತಪ್ಪಿದರೆ ಕರ್ನಾಟಕಕ್ಕೂ ಗಂಡಾಂತರ ತಪ್ಪಿದ್ದಲ್ಲ ಎಂದು ಉಲ್ಲೇಖಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶ್ರೀ ರಾಜೇಶ್ವರ ಶಾಸ್ತ್ರೀ, 80 ವರ್ಷಗಳಿಂದ ಈ ಪಂಚಾಂಗ ಹೊರಬರುತ್ತಿದ್ದು, ಗ್ರಹಗತಿಗಳನ್ನು ನೋಡಿ ಎಲ್ಲ ವಿಚಾರಗಳ ಬಗ್ಗೆ ಪಂಚಾಂಗ ರಚನೆಯಾಗುತ್ತದೆ. ಈ ವರ್ಷದ ಗ್ರಹಗತಿಯಂತೆ ಘಟನಾವಳಿಗಳು ಜರುಗುತ್ತಿವೆ ಎಂದಿದ್ದಾರೆ.