Thursday, 13th December 2018  

Vijayavani

Breaking News

ಧವನ್ ಬದಲು ರಾಹುಲ್​ಗೆ ಸ್ಥಾನ ನಿರೀಕ್ಷೆ

Friday, 12.01.2018, 3:01 AM       No Comments

ಸೆಂಚುರಿಯನ್: ಕೇಪ್​ಟೌನ್ ಟೆಸ್ಟ್ ಸೋಲಿನ ಬಳಿಕ ಭಾರತ ತಂಡದ ಆಯ್ಕೆ ಬಗ್ಗೆಯೇ ಹೆಚ್ಚಿನ ಟೀಕೆಗಳು ಕೇಳಿಬಂದಿವೆ. ಇದರಿಂದಾಗಿ ಈಗ 2ನೇ ಟೆಸ್ಟ್ ಪಂದ್ಯಕ್ಕೆ ಸಮತೋಲನದ ತಂಡ ಆರಿಸಲು ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಒಳಗೊಂಡ ಟೀಮ್ ಮ್ಯಾನೇಜ್​ವೆುಂಟ್ ನಿರ್ಧರಿಸಿದೆ. ಇದರ ಫಲವಾಗಿ ಕನ್ನಡಿಗ ಕೆಎಲ್ ರಾಹುಲ್ ಅವಕಾಶ ಪಡೆಯುವುದು ಬಹುತೇಕ ಖಚಿತವೆನಿಸಿದ್ದು, ಅವರಿಗೆ ಶಿಖರ್ ಧವನ್ ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ. ಆದರೆ ಮೊದಲ ಟೆಸ್ಟ್ ವೈಫಲ್ಯದ ನಡುವೆಯೂ ರೋಹಿತ್ ಶರ್ಮ ಮತ್ತೊಂದು ಅವಕಾಶ ಪಡೆಯುವುದು ಸ್ಪಷ್ಟವೆನಿಸಿದೆ.

ಕೆಟ್ಟ ಹೊಡೆತಗಳಿಂದ ವಿಕೆಟ್ ಒಪ್ಪಿಸಿರುವ ಧವನ್ ಬದಲು ತಾಂತ್ರಿಕವಾಗಿ ನಿಪುಣರಾಗಿರುವ ಕೆಎಲ್ ರಾಹುಲ್​ರನ್ನು ಸೆಂಚುರಿಯನ್​ನಲ್ಲಿ ಆಡಿಸಲು ಟೀಮ್ ಮ್ಯಾನೇಜ್​ವೆುಂಟ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 25 ವರ್ಷದ ರಾಹುಲ್ ಇತ್ತೀಚೆಗೆ ಉತ್ತಮ ಫಾಮರ್್​ನಲ್ಲೂ ಇರುವುದರಿಂದ ಮುರಳಿ ವಿಜಯ್ ಜತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ.

ಆದರೆ ಅಜಿಂಕ್ಯ ರಹಾನೆಗಾಗಿ ರೋಹಿತ್ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ವಿರಳವೆನಿಸಿದೆ. ಲಂಕಾ ವಿರುದ್ಧ ತವರಿನ ಸರಣಿಯಲ್ಲಿ ರೋಹಿತ್ ತೋರಿದ ಬಲಿಷ್ಠ ಆಟವನ್ನು ಒಂದು ವೈಫಲ್ಯಕ್ಕಾಗಿ ಕಡೆಗಣಿಸಲು ಕೊಹ್ಲಿ-ರವಿಶಾಸ್ತ್ರಿ ಸಿದ್ಧರಿಲ್ಲ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top