Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಧರ್ಮ ಮಾರ್ಗದಲ್ಲಿ ನಡೆಯುವ ಪ್ರತಿಜ್ಞೆ ಮಾಡಿ

Sunday, 28.01.2018, 3:00 AM       No Comments

ಹುಬ್ಬಳ್ಳಿ: ಪ್ರಾಣಿಗಿಲ್ಲದ ಅನೇಕ ಅನುಕೂಲತೆ ಮನುಷ್ಯನಿಗಿದೆ. ಇದರ ಸದುಪಯೋಗ ಧರ್ಮ ಕಾರ್ಯದ ಮೂಲಕ ಆಗಬೇಕಿದೆ. ನಾವೆಲ್ಲ ಧರ್ಮಧ್ವಜ ಹಿಡಿಯುವುದರೊಂದಿಗೆ ಧರ್ಮಮಾರ್ಗದಲ್ಲಿ ನಡೆಯುವ ಪ್ರತಿಜ್ಞೆ ಮಾಡಬೇಕು ಎಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತವಿಜಯಾನಂದ ಮಹಾಸ್ವಾಮೀಜಿ ಹೇಳಿದರು.

ತಡಸ ಗಾಯತ್ರಿ ತಪೋಭೂಮಿ ಭಕ್ತಿಮಂಟಪದಲ್ಲಿ ಕೋಟಿ ಜಪಯಜ್ಞದಲ್ಲಿ ಶನಿವಾರ ತುಳಸೀದಾಸ ರಚಿತ ಹನುಮಾನ ಚಾಲೀಸಾ ಪಠಣದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಸುಂದರ ಕಾಂಡದಲ್ಲಿ ಹನುಮಂತನಿಗಾಗಿಯೇ ಹತ್ತು ಸಾವಿರ ಶ್ಲೋಕಗಳನ್ನು ಮುಡಿಪಾಗಿಡಲಾಗಿದೆ. ಪ್ರತಿಯೊಬ್ಬರೂ ಬದುಕಿರುವಾಗಲೇ ಸುಖ-ಸಂತೋಷ ಪಡೆಯಬೇಕೆಂಬ ಅಭಿಲಾಷೆ ಇದರಲ್ಲಿದೆ. ಸ್ತೋತ್ರ ಪಠಣ ಮಾಡುವ ಮೂಲಕ ಸದಾಶಯಗಳನ್ನು ಪೂರೈಸಿಕೊಳ್ಳಬೇಕು. ಇದರಲ್ಲಿ ಪಂಚತತ್ವಗಳ ಮಿಲನ ಅಡಗಿರುವುದು ವಿಶೇಷವಾಗಿದೆ. ಗಾಯತ್ರಿ ಮಾತೆಗೂ ಹನುಮಂತನಿಗೂ ಸಾಮ್ಯತೆ ಇದೆ. ಆಕೆಯೂ ಐದು ಮುಖಗಳನ್ನು ಹೊಂದಿದ್ದು, ಮಾರುತಿ ಕೂಡ ಪಂಚಮುಖಿ ಪ್ರಾಣದೇವರಾಗಿದ್ದಾನೆ. ಅಗ್ನಿತತ್ವವನ್ನು ಮಾರುತಿ ತೋರಿದ್ದಾನೆ ಎಂದರು.

ಆಶ್ರಮದಿಂದ ಶ್ರೀಗಳ ಜತೆಯೇ ಆಗಮಿಸಿದ್ದ ಭಜನಾ ತಂಡದವರು ಸುಶ್ರಾವ್ಯವಾಗಿ ಹನುಮಾನ ಚಾಲೀಸಾ ಹಾಡಿದರು. ರಾಮೇಶ್ವರ ಹಾಗೂ ಕಲ್ಯಾಣ್ ಹಾಮೋನಿಯಂ, ಮೈಸೂರಿನ ರಾಘವೇಂದ್ರ ವಯಲಿನ್, ಕೃಷ್ಣಮೂರ್ತಿ ಕೊಳಲು, ಜಯತೀರ್ಥ ಪಂಚಮುಖಿ, ಪ್ರತೀಕ ಕಡ್ಲಿ ತಬಲಾ ಸಾಥ್ ನೀಡಿದರು.

ಸರ್ವಹೋಮಗಳ ಪೂರ್ಣಾಹುತಿ: ಗಾಯತ್ರಿ ಮಹಾಯಾಗದ ಇನ್ನುಳಿದ ಎಲ್ಲ ಹೋಮಗಳ ಪೂರ್ಣಾಹುತಿ ಕಾರ್ಯಕ್ರಮ ಜ.28 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಡಾ. ವಿದ್ಯಾಭಿನವ ವಿದ್ಯಾರಣ್ಯಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು.

ಮಧ್ಯಾಹ್ನ 3 ಗಂಟೆಗೆ ಉಗಾರ ಮಹಿಳಾ ಮಂಡಳ ಸದಸ್ಯರಿಂದ ಮರಾಠಿ ನೃತ್ಯರೂಪಕ, ಕೋಲ್ಕತದ ಸ್ನೇಹಾ ದೇಶಪಾಂಡೆ ಭರತನಾಟ್ಯ, ಬೆಂಗಳೂರಿನ ಕೃಷ್ಣೇಂದ್ರಸಮರ್ಥ ಅವರಿಂದ ಭಕ್ತಿ ಸಂಗೀತ ಜರುಗಲಿದೆ.

ಸಂಜೆ 6ಕ್ಕೆ ಸುಜ್ಞಾನ ದಾನಿ ಹಾಗೂ ಶಶಿಕಲಾ ದಾನಿ ಅವರಿಂದ ಜಲತರಂಗವಾದನ, ಸಂಜೆ 6.30ಕ್ಕೆ ಶ್ರೀಮಂದಿರದಲ್ಲಿ ಮಹಾದೀಪೋತ್ಸವ ನಡೆಯಲಿದೆ. ನಂತರ ಸಾಂಸ್ಕೃತಿಕ ಮಂಟಪದಲ್ಲಿ ಬಾಗಲಕೋಟೆಯ ಅನಂತ ಕುಲಕರ್ಣಿ ಅವರಿಂದ ಭಕ್ತಿ ಸಂಗೀತವಿದೆ.

ತ್ರಾಯತೇ ಸ್ಮರಣ ಸಂಚಿಕೆ ಬಿಡುಗಡೆ ಇಂದು: ಗಾಯತ್ರಿ ಮಹಾಯಾಗ ಸ್ಮರಣೆಗಾಗಿ ಗಾಯತ್ರಿ ಕುರಿತು ಹೆಸರಾಂತ ಲೇಖಕರು ಮತ್ತು ಪ್ರಖ್ಯಾತ ವೇದವಿದ್ವಾಂಸರ ಬರಹಗಳನ್ನು ಒಳಗೊಂಡ ತ್ರಾಯತೇ ಸ್ಮರಣ ಸಂಚಿಕೆ ಜ. 28ರಂದು ಬಿಡುಗಡೆಯಾಗಲಿದೆ. ಶ್ರೀ ಡಾ. ವಿದ್ಯಾಭಿನವ ವಿದ್ಯಾರಣ್ಯಭಾರತೀ ಸ್ವಾಮೀಜಿ ಬಿಡುಗಡೆ ಮಾಡುವರು.

Leave a Reply

Your email address will not be published. Required fields are marked *

Back To Top