ಸಿಂದಗಿ: ವಿಶ್ವದ ಎಲ್ಲ ಧರ್ಮಗಳು ಶಾಂತಿ, ಸಾಮರಸ್ಯದ ಬದುಕಿನ ಗುರಿ ಮತ್ತು ಮೋವನ್ನು ಅರುಹಿವೆ. ನಮ್ಮ ಧರ್ಮ ಪ್ರೀತಿಸಿ, ಪರ ಧರ್ಮ ಗೌರವಿಸಬೇಕು ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ಆದಿಶೇಷ ಸಂಸ್ಥಾನ ಮಠದಲ್ಲಿ 29ನೇ ಜಾತ್ರಾ ಮಹೋತ್ಸವದ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಧರ್ಮ ಬರೀ ಮಾತಾಗಬಾರದು, ನುಡಿದಂತೆ ನಡೆಯುವ ಪಾಲನಾ ಕರ್ತವ್ಯವಾಗಬೇಕು. ಅಧ್ಯಾತ್ಮ ಜೀವನವು ಶಾಂತಿ ಮತ್ತು ನೆಮ್ಮದಿ ಸಮಾಧಾನಗಳ ಸಂಗಮವಾಗಿದೆ ಎಂದರು.
ಮಾನವರು ಮರೆತ ಬದುಕಿನ ಸಂದೇಶಗಳ ಜಾಗೃತಿಗೆ ಪಂಚ ಪೀಠಗಳು ಸದಾ ಶ್ರಮಿಸುತ್ತ್ತಿವೆ ಎಂದು ನುಡಿದರು.
ಸಿಂದಗಿ ಬಸ್ ನಿಲ್ದಾಣಕ್ಕೆ ಶ್ರೀ ಚನ್ನವಿರ ಶಿವಾಚಾರ್ಯರ ಹೆಸರಿಟ್ಟಿದ್ದಕ್ಕಾಗಿ ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡೆಸಿದರು.
ಅದಿಶೇಷ ಸಂಸ್ಥಾನ ಮಠದ ಭಕ್ತೀಗಿತೆಗಳ ಧ್ವನಿಸುರುಳಿಯನ್ನು ಶಾಸಕರ ಪತ್ನಿ ನಾಗರತ್ನಾ ಮನಗೂಳಿ ಬಿಡುಗಡೆಗೊಳಿಸಿದರು.
ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ವೀರಸಂಗಮೇಶ್ವರ ಶಿವಾಚಾರ್ಯರು, ಮಳಲಿ ಡಾ.ಗುರುನಾಗಭೂಷಣ ಶಿವಾಚಾರ್ಯರು, ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ನಾಲವಾರ ಮಠದ ಡಾ.ಚಂದ್ರಶೇಖರ ಸ್ವಾಮೀಜಿ ಜಹಾಗೀರದಾರ, ಕೆಂಭಾವಿಯ ಚನ್ನಬಸವ ಶ್ರೀ, ಆಲೂರಿನ ಕೆಂಚ ವೃಷಭೇಂದ್ರ ಶ್ರೀ, ಅಶೋಕ ವಾರದ, ಗೊಲ್ಲಾಳಪ್ಪಗೌಡ ಪಾಟೀಲ (ಮಾಗಣಗೇರಿ),ಶ್ರೀಶೈಲಗೌಡ ಬಿರಾದಾರ, ಶರಣಮ್ಮ ನಾಯಕ, ಅಂಬಿಕಾ ಪಾಟೀಲ, ಶಂಕ್ರಮ್ಮ ಹಿರೇಮಠ, ಪ್ರೇಮಾ ಹಿರೇಮಠ, ನೀಲಮ್ಮ ಯಡ್ರಾಮಿ, ಜಯಶ್ರೀ ಹದನೂರು, ಚಂದ್ರಕಲಾ ಸುಣಗಾರ, ಬಸಯ್ಯ ಹಿರೇಮಠ ಪಾಲ್ಗೊಂಡಿದ್ದರು.