ಧರಣಿಗೆ ಬಳಲಿದ ಮಹಿಳೆಯರು

ಲಕ್ಷೆ್ಮೕಶ್ವರ: ಪಟ್ಟಣದ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 8 ವರ್ಷದಿಂದ ಕೆಲಸ ಮಾಡುತ್ತಿದ್ದ 12 ಮಹಿಳಾ ಪೌರ ಕಾರ್ವಿುಕರು ಮತ್ತೆ ತಮಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಪುರಸಭೆ ಎದುರು ನಡೆಸುತ್ತಿರುವ ಧರಣಿ ಹೋರಾಟ ಶನಿವಾರ 5ನೇ ದಿನ ಪೂರೈಸಿದೆ.

ಕಳೆದ 8 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತ ಬಂದಿದ್ದು, ಈಗ ಟೆಂಡರ್ ಅವಧಿ ಮುಗಿದಿದೆ ಎಂಬ ಕಾರಣದಿಂದ ನಮ್ಮನ್ನು ಕೆಲಸದಿಂದ ತೆಗೆಯಲಾಗಿದೆ. ಇದರಿಂದ ನಮ್ಮ ಬದುಕು ಬೀದಿಗೆ ಬಿದ್ದಂತಾಗಿದೆ. ಆದ್ದರಿಂದ ನಮಗೆ ಮತ್ತೆ ಕೆಲಸ ನೀಡಬೇಕು. ಇಲ್ಲದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕೆಲಸ ಕಳೆದುಕೊಂಡಿರುವ ಮಹಿಳಾ ಕಾರ್ವಿುಕರು ಜು. 3ರಿಂದ ಹೋರಾಟ ಕೈಗೊಂಡಿದ್ದಾರೆ. 2008 ರಿಂದ 2016 ರವರೆಗೆ ಹೊರಗುತ್ತಿಗೆ ಪೌರಕಾರ್ವಿುಕರಾಗಿ ಸೇವೆ ಸಲ್ಲಿಸಿದ ನಮ್ಮನ್ನು ಟೆಂಡರ್ ಅವಧಿ ಮುಗಿದ ಕಾರಣ ಹೇಳಿ ಕೆಲಸದಿಂದ ತೆಗೆದಿರುವುದು ಸರಿಯಲ್ಲ. ಈಗ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ವಿುಕರ ನೇರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಹೊರಗುತ್ತಿಗೆ ಪೌರಕಾರ್ವಿುಕರಿಗೆ ಅವಕಾಶ ಕಲ್ಪಿಸಬೇಕು. 8 ವರ್ಷಗಳ ಸೇವೆ ಪರಿಗಣಿಸಬೇಕು. ಸೋಮವಾರ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮತ್ತು ಅಧ್ಯಕ್ಷ ಎಂ.ಆರ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ನೀಲಪ್ಪ ಧೂಳಮ್ಮನವರ, ಉಡಚಪ್ಪ ಭಜಕ್ಕನವರ, ಜಗದೀಶ ನಂದೆಣ್ಣವರ, ನೀಲಕಂಠಪ್ಪ ಬಸವನಾಯ್ಕರ, ಮೈಲಾರಪ್ಪ ಬೂಶಿಯವರ, ರಮೇಶ ಅಯ್ಯಣ್ಣವರ, ಆನಂದ ನಂದೆಣ್ಣವರ, ರವಿ ಭಜಕ್ಕನವರ, ನೀಲಪ್ಪ ಭಜಕ್ಕನವರ, ಮಾರುತಿ ನಂದೆಣ್ಣವರ, ಮಂಜು ಭಜಕ್ಕನವರ, ನಿಂಗಪ್ಪ ಭಜಕ್ಕನವರ, ರವಿ ಗುಡಿಸಲಮನಿ, ಪರಶುರಾಮ ಹುಲ್ಲಪ್ಪನವರ, ಮಾರುತಿ ನಂದೆಣ್ಣವರ, ಯಲ್ಲಪ್ಪ ಹಾದರಗೇರಿ, ರಮೇಶ ನಂದೆಣ್ಣವರ ಪಾಲ್ಗೊಂಡಿದ್ದರು.

ಸಮಸ್ಯೆ ಆಲಿಸಲು ಬಾರದ ಜಿಲ್ಲಾಧಿಕಾರಿ

5 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಮಹಿಳೆಯರ ಸಮಸ್ಯೆ ಕೇಳಲು ಯಾರೊಬ್ಬರೂ ಬಂದಿಲ್ಲ. ಬೆಳಗ್ಗೆಯಿಂದಲೇ ಜಿಲ್ಲಾಧಿಕಾರಿ ಧರಣಿ ನಿರತರ ಸ್ಥಳಕ್ಕೆ ಬರುತ್ತಾರೆ ಎನ್ನಲಾಗಿತ್ತಾದರೂ ಸಂಜೆಯಾದರೂ ಬರಲಿಲ್ಲ. ಮಹಿಳೆಯರು ಮಾತ್ರ ಗಾಳಿ, ಮಳೆ, ಚಳಿಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದಾರೆ. ಸರಿಯಾಗಿ ನಿದ್ರೆ, ಊಟ, ಸ್ನಾನವಿಲ್ಲದೆ ಅಸ್ವಸ್ಥ ಸ್ಥಿತಿಯಲ್ಲಿ ಧರಣಿ ಮುಂದುವರಿಸಿದ್ದಾರೆ. ನಮ್ಮನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಮಹಿಳೆಯರು ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ. ಇತ್ತ ಮುಖ್ಯಾಧಿಕಾರಿಯವರು ಇದು ತನ್ನ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ತೀರ್ವನಿಸಲಾಗುವುದು ಎನ್ನುತ್ತಿದ್ದಾರೆ. ಈಗ ಧರಣಿಯು ಸೋಮವಾರದ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅಲವಂಬಿತವಾಗಿದೆ.