ದ್ವಿತೀಯ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ಬೀದರ್: ನಗರದ ರಾಂಪುರೆ ಕಾಲನಿಯಲ್ಲಿರುವ ಶ್ರೀ ಲಕ್ಷ್ಮೀ ಸತ್ಯನಾರಾಯಣ ಮಂದಿರದಲ್ಲಿ ಐದು ದಿನ ಹಮ್ಮಿಕೊಂಡಿದ್ದ ದ್ವಿತೀಯ ಬ್ರಹ್ಮೋತ್ಸವಕ್ಕೆ ಶನಿವಾರ ತೆರೆ ಬಿತ್ತು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮಂದಿರದ ಪರಿಸರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶೃದ್ಧೆ, ಭಕ್ತಿಯಿಂದ ಜರುಗಿದವು.
ಶುಕ್ರವಾರ ತುಳಸಿ ಅರ್ಚನೆ, ಹವನ, ವಿಶಿಷ್ಟ ಅಲಂಕಾರ ಸೇರಿ ನಾನಾ ಕಾರ್ಯಕ್ರಮಗಳು ನಡೆದವು. ಕೊನೇ ದಿನವಾದ ಶನಿವಾರ ಅಭಿಷೇಕ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಹವನ ಹಾಗೂ ಪೂಣರ್ಾಹುತಿ ನಡೆಯಿತು. ಮಧ್ಯಾಹ್ನ 12 ರಿಂದ 2 ಗಂಟೆ ಅವಧಿಯ ಸುಡು ಬಿಸಿಲಿನ ತಾಪದಲ್ಲೇ ಶ್ರೀ ನರಸಿಂಹ ದೀಕ್ಷಿತ್ ಅವರ ನೇತೃತ್ವದಲ್ಲಿ 11 ವೈದಿಕರ ಮಂತ್ರ ಘೋಷಗಳೊಂದಿಗೆ ಪೂಣರ್ಾಹುತಿ ನಡೆಯಿತು. ನೂರಾರು ದಂಪತಿ ಹವನ ಪೂರ್ಣಾಹುತಿಯಲ್ಲಿ ಪಾಲ್ಗೊಂಡಿದ್ದರು.
ನಂತರ ಶ್ರೀ ಲಕ್ಷ್ಮೀ ಸತ್ಯನಾರಾಯಣ ಕಲ್ಯಾಣ ಮಹೋತ್ಸವ ಜರುಗಿತು. ನೂರಾರು ಭಕ್ತರು ಈ ಸಮಾರಂಭಕ್ಕೆ ಸಾಕ್ಷಿಯಾದರು. ರಾತ್ರಿ ದೀಪೋತ್ಸವ, ರಥೋತ್ಸವ, ಭಜನೆಯೊಂದಿಗೆ ಬ್ರಹ್ಮೋತ್ಸವ ಕಾರ್ಯಕ್ರಮಗಳು ಕೊನೆಗೊಂಡವು. ಶ್ರೀ ಲಕ್ಷ್ಮೀ ಸತ್ಯನಾರಾಯಣ ಶಿಲಾ ಮೂರ್ತಿಗೆ ದಿನವೂ ಮಾಡಿದ ವಿಶೇಷ ಪುಷ್ಪಾಲಂಕಾರ ಭಕ್ತರ ಕಣ್ಮನ ಸೆಳೆದವು. ಶ್ರೀ ಲಕ್ಷ್ಮೀ ಸತ್ಯನಾರಾಯಣ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮೀ ಸತ್ಯನಾರಾಯಣ ಗೋ ಶಾಲಾದಿಂದ ಎಲ್ಲ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದವು. ಪ್ರತಿದಿನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಮೈಲಾಪುರ, ವ್ಯವಸ್ಥಾಪಕ ಸಮಿತಿ ಪ್ರಮುಖರಾದ ಉಮಾಶಂಕರ ಮುದಗಲ್, ಹಣಮಯ್ಯ ಅರ್ಥಮ್, ರವಿ ಸ್ವಾಮಿ, ಜಾಧವ್ ಪಟೇಲ್, ಶಂಕರರಾವ ಕೊಟ್ಟರಕಿ, ದತ್ತಾತ್ರಯ ಸಿಂದೋಲ್, ಪ್ರೇಮನಾಥ ಜೋಶಿ, ಮಾರುತಿ ಪಂಚಭಾಯಿ, ನಂದಕಿಶೋರ ವರ್ಮಾ, ಜಗದೀಶ ಹೇಡಾ, ವಸಂತ ಪಟೇಲ್, ಅನುಸೂಯಾ ಕಾಳೆ, ಶಾಲಿನಿಬಾಯಿ ಹಿಬಾರೆ, ನಾರಾಯಣ ಅರ್ಥಮ್, ದಿಗಂಬರ ದೀಕ್ಷಿತ್, ಮಹೇಶ ಪಟೇಲ್, ವಿಕಾಸ ಗೋಯಲ್, ಮೋಹನ್ ಗಾದಾ, ನವನಾಥ ಬಿರಾದಾರ ಇತರರಿದ್ದರು.

ಗೋ ಇಲ್ಲದಿದ್ದರೆ ಬದುಕಿಲ್ಲ: ಬ್ರಹ್ಮೋತ್ಸವ ನಿಮಿತ್ತ ಮೂರು ದಿನ ಗೋ ಕಥಾ ಸಹ ನಡೆಯಿತು. ಔರಂಗಾಬಾದ್ನ ಗೋ ಸೇವಕ ವಿಜಯಕುಮಾರ ಪಲ್ಲೋಡ್ ಅವರು ಅರ್ಥಪೂರ್ಣ ಚಿಂತನೆ ಮೂಲಕ ಗೋ ಶಕ್ತಿಯ ಅನಾವರಣ ಮಾಡಿದರು. ಮಂದಿರದ ಪರಿಸರದಲ್ಲಿರುವ ಶ್ರೀ ಲಕ್ಷ್ಮೀ ಸತ್ಯನಾರಾಯಣ ಗೋ ಶಾಲಾ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಭಾರತೀಯರಿಗೆ ಗೋ ಒಂದು ಪ್ರಾಣಿಯಲ್ಲ. ಅದು ಶಕ್ತಿ ದೇವತೆ. ಭಾರತೀಯರ ಅಸ್ಮಿತೆ. ಗೋ ಇಲ್ಲದಿದ್ದರೆ ಭಾರತ ವಾಸಿಗಳಿಗೆ ಬದುಕಿಲ್ಲ ಎಂದು ಪ್ರತಿಪಾದಿಸಿದರು. ದೇಶದಲ್ಲಿ ಗೋ ಸಂಪತ್ತು ಕ್ರಮೇಣ ಕ್ಷೀಣಿಸುತ್ತಿರುವುದು ದುರಂತ ಸಂಗತಿ. ಗೋ ರಕ್ಷಣೆ ಆಗದಿದ್ದರೆ ಸಮಾಜಕ್ಕೆ ಆಪತ್ತು ಬರುವುದು ಖಚಿತ ಎಂಬುದು ಪ್ರತಿಯೊಬ್ಬರೂ ಅರಿಯಬೇಕು. ಭಾರತ ಮಾತಾ, ಗೋ ಮಾತಾ, ಭೂ ಮಾತಾ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು. ಗೋ ಹತ್ಯೆ ನಿಷೇಧಕ್ಕೆ ಸಕರ್ಾರ ಕಠಿಣ ಕಾನೂನು ತರಬೇಕು. ದೇಶದಲ್ಲಿ ಒಂದೂ ಗೋವಿನ ಹತ್ಯೆ ನಡೆಯದಂಥ ವ್ಯವಸ್ಥೆ ಜಾರಿಗೆ ಬಂದಾಗಲೇ ಸಮಾಜದಲ್ಲಿ ನೆಮ್ಮದಿ, ಸಮೃದ್ಧಿ ಕಾಣಬಹುದು ಎಂದು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *