ದೊರೆಸ್ವಾಮಿ ರಾಜೀನಾಮೆ ಇಂಗಿತ

ಬೆಂಗಳೂರು: ಭೂರಹಿತರಿಗೆ ಭೂಮಿ ಕೊಡಿಸಲು ರಚಿಸಿದ್ದ ಸಮಿತಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ನಂತರ ಮಾತನಾಡಿದ ದೊರೆಸ್ವಾಮಿ, ಭೂಮಿರಹಿತರಿಗೆ ಭೂಮಿ ಕೊಡಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸಮಿತಿ ರಚಿಸಿದ್ದರು. ನಾನು ಸಹ ಸದಸ್ಯನಾಗಿದ್ದೆ. ಇದುವರೆಗೂ ಸಮಿತಿ ಏನೂ ಕೆಲಸ ಮಾಡಿಲ್ಲ. ರಾಜೀನಾಮೆ ಕೊಟ್ಟು ಹೊರಬರುತ್ತೇವೆಂದು ಹೇಳಿದ್ದೇನೆ. ದುಡುಕಿ ರಾಜೀನಾಮೆ ನೀಡಬೇಡಿ, ಸಿಎಂ ಜತೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹೇಳಿದರು.