ದೊಡ್ಡ ಹಬ್ಬಕ್ಕೆ ಸಿದ್ಧತೆ ಜೋರು

blank

ತಿ.ನರಸೀಪುರ: ಪಟ್ಟಣದ ಹಳೇ ಸಂತೇಮಾಳದಲ್ಲಿ ಮಾ.25ರಂದು ಶ್ರೀ ದೊಡ್ಡಮ್ಮತಾಯಿ, ಶ್ರೀ ಚಿಕ್ಕಮ್ಮತಾಯಿ ಅಮ್ಮನವರ ದೊಡ್ಡ ಹಬ್ಬ ನಡೆಯಲಿದ್ದು ದೇವಾಲಯದ ಆಸುಪಾಸಿನ ಬಯಲು ಪ್ರದೇಶದಲ್ಲಿ ಸಿದ್ಧತಾ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

ಪ್ರತಿ ವರ್ಷ ಯುಗಾದಿ ಹಬ್ಬದ ಪೂರ್ವದಲ್ಲಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಹಬ್ಬ ನಡೆಯುತ್ತದೆ. ಗೋಪಾಲಪುರ ಹಾಗೂ ಹಳೇ ಪಟ್ಟಣದ ನಿವಾಸಿಗಳು ಎಲ್ಲರೂ ಕುಟುಂಬ ಸಮೇತ ಊರನ್ನು ತೊರೆದು ಹಳೇ ಸಂತೇಮಾಳದ ಸುತ್ತಲಿನ ಬಯಲು ಪ್ರದೇಶದಲ್ಲಿ ಬಿಡಾರ ಹಾಕುತ್ತಾರೆ. ಅಲ್ಲಿಯೇ ಹಬ್ಬದ ಪ್ರಯುಕ್ತ ಅಡುಗೆ ಮಾಡಿ ದೇವಿಯರಿಗೆ ಎಡೆಯನ್ನು ಕೊಟ್ಟು, ನೆಂಟರಿಷ್ಟರನ್ನು ಆಹ್ವಾನಿಸಿ ಆತಿಥ್ಯ ನೀಡುತ್ತಾರೆ. ದೇವಾಲಯಕ್ಕೆ ಸುಣ್ಣಬಣ್ಣ ಬಳಿಯುವ ಕಾರ್ಯ ಮುಗಿದಿದ್ದು, ಟೌನ್ ಮತ್ತು ಗೋಪಾಲಪುರ ನಿವಾಸಿಗಳು ಹಬ್ಬಕ್ಕೆ ಬಿಡಾರದ ಸ್ಥಳವನ್ನು ಆಯ್ಕೆ ಮಾಡಿ, ಗುರುತು ಹಚ್ಚಿ ಬಿಡುತ್ತಿದ್ದಾರೆ.

ಹಬ್ಬದ ದಿನದಂದು ದೇವಾಲಯದಲ್ಲಿ ಇಡಲಾಗುವ ಸಿಹಿ ಮತ್ತು ಖಾರದ ಎಡೆಯನ್ನು ಸರಿರಾತ್ರಿ 10 ಗಂಟೆಗೆ ಊರಾಚೆ ಇಡಲಾಗುತ್ತದೆ. ಮಾರಿಕಾಂಬೆ ದೇವಿಯರಿಗೆ ಮೇಕೆಯನ್ನು ಬಲಿಕೊಟ್ಟು, ಗೋಪಾಲಪುರ ಹಾಗೂ ಹಳೇ ಟೌನಿನಲ್ಲಿ ಪೀಡೆ ಮರಿ ಎಳೆಯುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ. ಎಲ್ಲ ಸಮುದಾಯದವರು ಹಬ್ಬ ಆಚರಿಸುತ್ತಾರೆ ಎಂದು ಮುಖಂಡರಾದ ಶಾಂತರಾಜು, ಸತೀಶ್, ಪುಳ್ಳಾರಿ ಮಹದೇವ, ಗೋಪಾಲಪುರ ರಾಜಣ್ಣ, ತಬಲಮೂರ್ತಿ ಹಾಗೂ ಅರ್ಚಕ ದೇವರಾಜು ತಿಳಿಸಿದ್ದಾರೆ.

Share This Article

ಒಂದು ತಿಂಗಳು ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸದಿದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಶಾಕಿಂಗ್​ ಸಂಗತಿ… Tongue

Tongue : ನಾಲಿಗೆ ನಮ್ಮ ದೇಹದ ಪ್ರಮುಖ ಅಂಗ. ನಾಲಿಗೆ ಇಲ್ಲದಿದ್ದರೆ ಯಾವುದೇ ಆಹಾರ ರುಚಿಸುವುದಿಲ್ಲ.…

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…