20.4 C
Bangalore
Monday, December 9, 2019

ದೊಡ್ಡ ಕಟ್ಟಡದಲ್ಲಿ ಸಿಗಲ್ಲ ಸಣ್ಣ ಚಿಕಿತ್ಸೆ

Latest News

ಬೈ ಎಲೆಕ್ಷನ್ ರಿಸಲ್ಟ್​| ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೀದರ್: ಬ್ಲಡ್ ಟೆಸ್ಟ್ ಮಾಡಲ್ಲ. ಎಕ್ಸ್ರೇ ಫಿಲ್ಮ್ ರೀಲ್ ಇಲ್ಲ. ಸಾ್ಕೃನಿಂಗ್ ಮಾಡಲು ಯಾರೂ ದಿಕ್ಕಿಲ್ಲ. ಔಷಧ ಹೊರಗಿನಿಂದ ತರಬೇಕು. ಆರು ಲಿಫ್ಟ್ಗಳಲ್ಲಿ ಐದು ಬಂದ್ ಬಿದ್ದಿವೆೆ. ಫ್ಯಾನ್ಗಳು ತಿರುಗಲ್ಲ. ಶೌಚಗೃಹಗಳು ಕಾಲಿಡದಷ್ಟು ಗಲೀಜು. ಬಾತ್ರೂಂ ಸ್ಥಿತಿ ನೋಡುವುದಕ್ಕೂ ಆಗಲ್ಲ. ಅನೇಕ ವಿಭಾಗ ಖಾಲಿ ಬಿದ್ದಿದ್ದು, ಕೋಣೆಗಳಲ್ಲಿ ಧೂಳು ತುಂಬಿದೆ. ಯಂತ್ರೋಪಕರಣಗಳ ಬಳಕೆ ಆಗುತ್ತಿಲ್ಲ. ಬೆಡ್, ಬೆಡ್ಶೀಟ್ ಹಾಳಾಗಿವೆ. ಲೈಟ್ ಇಲ್ಲದಿದ್ದಕ್ಕೆ ಸಮರ್ಪಕ ಬೆಳಕಿಲ್ಲ. ಎಲ್ಲೆಡೆ ಅಸ್ವಚ್ಛತೆ, ಹೊಲಸಿನ ತಾಂಡವ. ಕಟ್ಟಡ ಬಹಳ ದೊಡ್ಡದಾಗಿದ್ದರೂ ಒಳಗೆ ಸಣ್ಣ ಚಿಕಿತ್ಸೆಯೂ ಸಿಗಲ್ಲ…

ಇದು ಸುಮಾರು 150 ಕೋಟಿ ವೆಚ್ಚದಲ್ಲಿ ನಿಮರ್ಿಸಿದ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆಯ ವಾಸ್ತವ ಸ್ಥಿತಿ ! ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ, ಸ್ಥಳೀಯ ಶಾಸಕರೂ ಆದ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ರಹೀಮ್ ಖಾನ್ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಈ ಸಮಸ್ಯೆಗಳ ಪಟ್ಟಿ, ಅವ್ಯವಸ್ಥೆ ವಿರಾಟ್ ದರ್ಶನ ಕಂಡು ದಂಗಾದರು. ಬಡವರ ಆರೋಗ್ಯಕ್ಕಾಗಿ ಸಕರ್ಾರ ಏನೆಲ್ಲ ವ್ಯವಸ್ಥೆ ಮಾಡುತ್ತಿದೆ. ಎಷ್ಟೆಲ್ಲ ಹಣ ಖಚರ್ು ಮಾಡುತ್ತಿದ್ದರೂ ರೋಗಿಗಳಿಗೆ ಸಣ್ಣಪುಟ್ಟ ಚಿಕಿತ್ಸೆಯೂ ಸಿಗದಿರುವುದಕ್ಕೆ ಮರುಕಪಟ್ಟರು. ಆಸ್ಪತ್ರೆ ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು.

ಆಸ್ಪತ್ರೆ ವಿವಿಧೆಡೆ ಸುತ್ತಾಡಿದ ಸಚಿವ ಖಾಶೆಂಪುರ, ಎಲ್ಲೆಡೆ ಅಶುಚಿತ್ವ ಕಂಡು ಸಿಡಿಮಿಡಿಗೊಂಡರು. ಅಲ್ಲಲ್ಲಿ ರೋಗಿಗಳು, ಸಾರ್ವಜನಿಕರು ಗೋಳು ತೋಡಿಕೊಂಡಾಗ ಬ್ರಿಮ್ಸ್ ನಿದರ್ೇಶಕ ಡಾ.ಕ್ಷೀರಸಾಗರ ಅವರನ್ನು ಏನಿ ಅವಸ್ಥೆ ಎಂದು ತರಾಟೆಗೆ ತೆಗೆದುಕೊಂಡರು. ಇಲ್ಲಿನ ದುರವಸ್ಥೆ ನೋಡಿ ನಿಮಗೇನೂ ಅನಿಸುವುದಿಲ್ಲವೆ? ಕನಿಷ್ಠ ಚಿಕಿತ್ಸೆಯಾದರೂ ಸಮರ್ಪಕ ಕೊಡಬೇಕೆಂಬ ಮನೋಭಾವ ಇಲ್ಲವೆ? ಪ್ರತಿ ಹಂತದಲ್ಲೂ ಅವ್ಯವಸ್ಥೆ, ಸಮಸ್ಯೆಗಳೇ ಇವೆ. ಇದು ನಿಮ್ಮ ಕಾರ್ಯವೈಖರಿ ಎಂಥದ್ದು ಎಂಬುದನ್ನು ಸ್ಪಷ್ಟಪಡಿಸುತ್ತಿದೆ ಎಂದು ಹರಿಹಾಯ್ದರು.
ಕಟ್ಟಡ ದೊಡ್ಡದಿದ್ದಷ್ಟು ಸಮಸ್ಯೆಗಳೂ ಹೆಚ್ಚಾಗಿ ಕಾಣುತ್ತಿವೆ. ಯಾವ ವಾಡರ್್ನಲ್ಲೂ ಸ್ವಚ್ಛತೆ ಇಲ್ಲ. ಶೌಚಗೃಹದೊಳಗೆ ಹೋಗುವಂತಿಲ್ಲ. ರೋಗಿಗಳು ಏನು ಮಾಡಬೇಕು? ಪ್ಯಾರಾಸಿಟಮಲ್ ಗುಳಿಗೆ ಕೊಡಲು, ಬ್ಲಡ್ ಟೆಸ್ಟ್ ಮಾಡುವುದಕ್ಕೂ ಗತಿಯಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಎಕ್ಸ್ರೇ ಮಾಡಿದರೆ ಫಿಲ್ಮ್ ರೀಲ್ ಇಲ್ಲದ ಕಾರಣ ರಿಪೋಟರ್್ಗಳನ್ನು ಮೊಬೈಲ್ಗೆ ಹಾಕುತ್ತಿರುವುದನ್ನು ರೋಗಿಗಳು ಸಚಿವರಿಗೆ ತೋರಿಸಿದರು. ಇದನ್ನು ನೋಡಿ ಛೇ ಛೇ… ಎಂಥ ವ್ಯವಸ್ಥೆ ಎಂದ ಸಚಿವರು, ಎಕ್ಸ್ರೇ ಫಿಲ್ಮ್ಗೆ ಗತಿಯಿಲ್ಲ ಎಂದ ಮೇಲೆ ಆಸ್ಪತ್ರೆ ಹೇಗೆ ನಡೆಸುವಿರಿ? ಜನರಿಗೆ ಯಾವ ಸಂದೇಶ ನೀಡುತ್ತಿರುವಿರಿ ಎಂದು ನಿದರ್ೇಶಕರ ವಿರುದ್ಧ ಗರಂ ಆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಾಶೆಂಪುರ, ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಡಿ ಗ್ರೂಪ್ ಸಿಬ್ಬಂದಿ ಕೊರತೆಯಿಂದ ಅಶುಚಿತ್ವ ಹೆಚ್ಚಾಗಿದೆ. ಎರಡು ವಾರದಲ್ಲಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಸೂಚಿಸಲಾಗಿದೆ. ಎಲ್ಲ ಸಮಸ್ಯೆ ನಿವಾರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಹಣದ ಕೊರತೆ ಇಲ್ಲ. ಕೆಲಸ ಮಾಡುವವರಲ್ಲಿನ ಆಸಕ್ತಿ, ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಉದ್ಭವಿಸಿವೆ. ಶೀಘ್ರ ಇದಕ್ಕೆ ಸರ್ಜರಿ ಮಾಡುವೆ. ಇನ್ಮುಂದೆ 15 ದಿನಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿ ವ್ಯವಸ್ಥೆ ಪರಾಮಶರ್ೆ ಮಾಡುವೆ. ಉತ್ತಮ ಕಾಯಂ ನಿದರ್ೇಶಕರನ್ನು ಬೇಗ ನೇಮಿಸಲಾಗುವುದು. ವಿಶೇಷ ಅಧಿಕಾರಿ ನೇಮಿಸುವ ಬಗ್ಗೆಯೂ ಚಿಂತಿಸಲಾಗುವುದು ಎಂದರು.

ಸಚಿವರು ನಾನಾ ವಾಡರ್್ಗಳಲ್ಲಿದ್ದ ಒಳ ರೋಗಿಗಳಿಗೆ ಭೇಟಿಯಾಗಿ ಆರೋಗ್ಯ ವಿಚಾರಿಸಿ ಚಿಕಿತ್ಸಾ ವ್ಯವಸ್ಥೆ ಹೇಗಿದೆ ಎಂದು ಕೇಳಿದರು. ಅನೇಕರು ನಾನಾ ಸಮಸ್ಯೆ ಬಿಚ್ಚಿಟ್ಟರು. ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಅಂತಪ್ಪನೋರ, ಶಸ್ತ್ರ ಚಿಕಿತ್ಸಕ ಡಾ.ರತಿಕಾಂತ ಸ್ವಾಮಿ, ಡಾ.ಆನಂದ ಜಾಬಶೆಟ್ಟಿ, ಅಪರ ಡಿಸಿ ರುದ್ರೇಶ ಗಾಳಿ, ಲೋಕೋಪಯೋಗಿ ಇಇ ಪ್ರಶಾಂತ ಇದ್ದರು.

9 ತಿಂಗಳ ಹಿಂದೆಯೂ ಇದೇ ಪರಿಸ್ಥಿತಿ ಇಲ್ಲಿತ್ತು !
2018ರ ಆಗಸ್ಟ್ 16ರಂದು ಸಚಿವ ಬಂಡೆಪ್ಪ ಖಾಶೆಂಪುರ ಬ್ರಿಮ್ಸ್ಗೆ ಭೇಟಿ ನೀಡಿದ್ದಾಗಲೂ ಈ ಎಲ್ಲ ಸಮಸ್ಯೆ ಕಂಡಿದ್ದರು. ಆದಷ್ಟು ಬೇಗ ಎಲ್ಲ ವ್ಯವಸ್ಥೆ ಸರಿಪಡಿಸಿ ಆಸ್ಪತ್ರೆ ಮಾದರಿ ಮಾಡುವೆ ಎಂದು ಹೇಳಿದ್ದರು. ಆದರೆ 9 ತಿಂಗಳಾದರೂ ವ್ಯವಸ್ಥೆ ಸುಧಾರಿಸಿಲ್ಲ. ಡಿ ದರ್ಜೆ ನೌಕರರ ನೇಮಕ ಶೀಘ್ರ ಎಂದು ಆಗ ಹೇಳಿದ್ದರು. ಈಗ ಅದನ್ನೇ ಪುನರುಚ್ಚರಣೆಯಾಗಿದೆೆ. ಆಸ್ಪತ್ರೆಗೆ ನಿಜಕ್ಕೂ ಬಹಳ ಸರ್ಜರಿ ಮಾಡಬೇಕಿದೆ ಎಂದು ಆಗ ತೆಗೆದಿದ್ದ ಉದ್ಗಾರ ಈಗಲೂ ಬಂತು. ನೀವು ಈ ಹಿಂದೆ ಭೇಟಿ ನೀಡಿದ ನಂತರದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂದು ಸಚಿವರನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಬರಲಿಲ್ಲ. ಆಥರ್ೋಪೆಡಿಕ್ ವಿಭಾಗದಲ್ಲಿ ಸರ್ಜರಿ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಪ್ರತಿಕ್ರಿಯಿಸಿದರು. ಕೆಲವೊಂದು ಬದಲಾವಣೆ ಆಗಿವೆ. ಆದರೆ ಆಗಬೇಕಿರುವುದು ಬಹಳಷ್ಟಿದೆ ಎಂದು ಖಾಶೆಂಪುರ ಒಪ್ಪಿಕೊಂಡರು.

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...