More

  ದೊಡ್ಡದೇವರ ಜಾತ್ರೆ ನಾಳೆಯಿಂದ ಆರಂಭ

  ಚಿತ್ರದುರ್ಗ: ಜಿಲ್ಲೆಯ ವಿವಿಧ ಗ್ರಾಮಗಳ ನೂರಾರು ಕುಟುಂಬಗಳ ಮನೆದೇವರಾದ ಭಾಗೋಡೇಶ್ವರ ಸ್ವಾಮಿಯ ದೊಡ್ಡದೇವರ ಜಾತ್ರೆ ಮಾ. 20ರಿಂದ ಆರಂಭವಾಗಿ 22ರವರೆಗೂ ಜರುಗಲಿದೆ.

  ಇದೇ ವೇಳೆ ಅಶ್ವರೂಢ ಭಾಗೋಡೇಶ್ವರ ಸ್ವಾಮಿಯ ನೂತನ ಬೆಳ್ಳಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮವೂ ನಡೆಯಲಿದೆ. ಇದಕ್ಕಾಗಿ ಸ್ವಾಮಿಯ ಮೂಲ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲೂಕಿನ ಬ್ರಹ್ಮಸಮುದ್ರ ಮಂಡಲದ ಕೋನಾಪುರ ಗ್ರಾಮ ಸಜ್ಜಾಗಿದೆ.

  20ರ ಬೆಳಗ್ಗೆ 9ಕ್ಕೆ ಫಾಲ್ಗುಣ ಶುದ್ಧ ಏಕಾದಶಿಯಂದು ಹಂಪಿಯಲ್ಲಿ ಗಂಗಾಪೂಜೆ, 21ರ ಬೆಳಗ್ಗೆ 4ಕ್ಕೆ ದ್ವಾದಶಿಯಂದು ಹೋಮ-ಹವನ, ಪೂಜಾ ಕೈಂಕರ್ಯ, ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಡಲಕ್ಕಿ ಸೇವೆ ನೆರವೇರಲಿದೆ.

  22ರ ಮಧ್ಯಾಹ್ನ 12.05ಕ್ಕೆ ತ್ರಯೋದಶಿಯಂದು ಯಲ್ಲಮ್ಮ ಸಾಕಿ ಕಾರ್ಯಕ್ರಮ ನಡೆಯಲಿದೆ. ಈ ಮೂರು ದಿನವೂ ಸ್ವಾಮಿಯ ಭಕ್ತರಿಗೆ ಪ್ರಸಾದ, ಅನ್ನದಾಸೋಹ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರೆ ಯಶಸ್ವಿಗೊಳಿಸಬೇಕು ಎಂದು ಚಿತ್ರದುರ್ಗ ತಾಲೂಕಿನ ಐನಹಳ್ಳಿ, ಕುರುಬರಹಳ್ಳಿ, ಬುರುಜನಹಟ್ಟಿ, ಮಾಳಪ್ಪನಹಟ್ಟಿ, ಮಾಡನಾಯಕನಹಳ್ಳಿ, ಕೋನಾಪುರ ಗ್ರಾಮಸ್ಥರು ಹಾಗೂ ಬಿಲ್ಲಿನ ಕುರುಬರು ಮನವಿ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts