ದೈಹಿಕ, ಬೌದ್ಧಿಕಶಕ್ತಿ ವೃದ್ಧಿಗೆ ಕ್ರೀಡೆ ಸಹಕಾರಿ

ಶಿವಮೊಗ್ಗ: ಕ್ರೀಡೆಗಳು ಮಕ್ಕಳ ದೈಹಿಕ ಮತ್ತು ಬೌದ್ಧಿಕ ಶಕ್ತಿ ವೃದ್ಧಿ ಮಾಡಲು ಸಹಕಾರಿ ಆಗಿವೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ಅಭಿಪ್ರಾಯಪಟ್ಟರು.

ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ಮತ್ತು ಮೌಲೆ ಶೋಟೊಕಾನ್ ಕರಾಟೆ ಡು ಅಸೋಸಿಯೇಶನ್ ಆಯೋಜಿಸಿದ್ದ ಶಿವಮೊಗ್ಗ ಓಪನ್ ದ್ವಿತೀಯ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಪಟುಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಇಂದಿನ ಸೋಲು ಮುಂದಿನ ಸಾಧನೆಗೆ ದಾರಿ ದೀಪವಾಗಬೇಕು. ಸೋಲನುಭವಿಸಿದ ಕಾರಣಕ್ಕೆ ಹತಾಶರಾಗದೆ ಮುಂದಿನ ಗುರಿಯತ್ತ ಗಮನ ಹರಿಸಬೇಕು. ಕಠಿಣ ಪರಿಶ್ರಮ ಹಾಕಿದಾಗ ಯಶಸ್ಸು ಸಾಧ್ಯ ಎಂದರು.

ಕರಾಟೆ ಒಳಗೊಂಡು ಯಾವುದೇ ಕ್ರೀಡೆಗಳು ಸ್ಪರ್ಧಾಳುಗಳ ಬುದ್ಧಿ ಶಕ್ತಿ ಹೆಚ್ಚಿಸುತ್ತವೆ. ಮುಖ್ಯವಾಗಿ ಸ್ಪರ್ಧಾಳುಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಸೋಲಿನ ಕಹಿ ಮರೆತು ಮುನ್ನಡೆಯಬೇಕು. ಆಗ ಜೀವನವೂ ಯಶಸ್ವಿ ಆಗುತ್ತದೆ ಎಂದು ಹೇಳಿದರು.

ನರೇಂದ್ರ ಮೋದಿ ವಿಚಾರ ಮಂಚ್ ರಾಜ್ಯಾಧ್ಯಕ್ಷ ಬಳ್ಳೇಕೆರೆ ಸಂತೋಷ್, ಗಾಜನೂರು ಜವಹಾರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಪ್ರೇಮ್ುಮಾರ್, ಮಲೇಷಿಯಾದ ಗ್ರ್ಯಾಂಡ್ ಮಾಸ್ಟರ್ ಸೋ.ಕೆ.ಅನಂತನ್, ಶ್ರೀಲಂಕಾದ ಹಂಶ್ಸಿ ಮಡೋಂಜಾ, ನೇಪಾಳದ ಅಚ್ಯುತ್ ರಾಯ್, ಬಾಂಗ್ಲಾದೇಶದ ಆರೀಫ್ ಉರ್ ರಹಮಾನ್, ಕರ್ನಾಟಕ ಕರಾಟೆ ಡು ಅಸೋಸಿಯೇಶನ್ ಅಧ್ಯಕ್ಷ ಎಂ.ಅಲ್ತಾಫ್ ಪಾಷಾ ಮತ್ತಿತರರು ಪಾಲ್ಗೊಂಡಿದ್ದರು.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇಶ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ, ಕೇರಳ, ಶ್ರೀಲಂಕಾ, ಮಲೇಷಿಯಾ ಹಾಗೂ ಬಾಂಗ್ಲಾದೇಶದಿಂದ 2 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *