ದೇಸಿ ಆಹಾರ ಬಳಸಿ ದೇಶದ ಸಂಸ್ಕೃತಿ ಉಳಿಸಿ

blank

ದಾವಣಗೆರೆ : ನಿತ್ಯದ ಜೀವನದಲ್ಲಿ ದೇಸಿ ಆಹಾರವನ್ನು ಬಳಸಿ ದೇಶದ ಸಂಸ್ಕೃತಿಯನ್ನು ಉಳಿಸಬೇಕು ಎಂದು ವಿಜ್ಞಾನಿ ಡಾ.ಖಾದರ್ ವಲಿ ಹೇಳಿದರು.
 ತೋಳಹುಣಸೆಯ ಬಾಪೂಜಿ ಎಸ್.ಪಿ.ಎಸ್.ಎಸ್.ಪಿಯು ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
 ಸಿರಿಧಾನ್ಯಗಳ ಬಳಕೆಯ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿ, ರಾಗಿ, ಜೋಳ, ನವಣಿ, ಸಾವಿ ಮುಂತಾದ ಸಿರಿಧಾನ್ಯಗಳಲ್ಲಿರುವ ಕ್ಯಾಲ್ಷಿಯಂ, ಕಾರ್ಬೋಹೈಡ್ರೇಟ್ ಮುಂತಾದ ಪೋಷಕಾಂಶಗಳ ಬಗ್ಗೆ ತಿಳಿಸಿ, ಅವುಗಳನ್ನು ಬಳಕೆ ಮಾಡಿ ವೈದ್ಯರಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.
 ಪಿಜಾ, ಬರ್ಗರ್ ಮುಂತಾದ ಜಂಕ್ ಫುಡ್‌ಗಳು ದೈಹಿಕ ಮತ್ತು ಮಾನಸಿಕ ಅಸಮತೋಲನಕ್ಕೆ ಕಾರಣವಾಗುತ್ತವೆ. ಬಾಯಿ ರುಚಿಗೆ ತಿಂದು ಹಲವು ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ತಿಳಿಸಿದರು.
 ಹಾಲಿಗಿಂತಲೂ ಸಿರಿಧಾನ್ಯಗಳಲ್ಲಿರುವ ಹಾಲು ಹೆಚ್ಚು ಸೂಕ್ತ. ಸಿರಿಧಾನ್ಯಗಳ ಆಹಾರವೇ ಆರೋಗ್ಯಕರ. ಆದಷ್ಟು ಸಾತ್ವಿಕ ಆಹಾರವನ್ನು ರೂಢಿಸಿಕೊಳ್ಳಬೇಕು, ಬೆಳಗಿನ ಜಾವದಲ್ಲಿ ಪ್ರಾಣಾಯಾಮ ಮತ್ತು ಯೋಗಾಸನಗಳನ್ನು ಮಾಡಿ ರೋಗಗಳಿಂದ ಮುಕ್ತಿ ಪಡೆಯಿರಿ ಎಂದು ಹೇಳಿದರು.
 ಪಿ.ಎಸ್.ಎಸ್.ಇ.ಎಂ.ಆರ್ ಶಾಲೆ ಮತ್ತು ಕಾಲೇಜಿನ ಮುಖ್ಯಸ್ಥ ಮಂಜುನಾಥ ರಂಗರಾಜು ಮಾತನಾಡಿ, ಡಾ.ಖಾದರ್ ವಲಿ ಅವರ ವ್ಯಕ್ತಿತ್ವ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ತಿಳಿಸಿದರು.
 ಬಾಪೂಜಿ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯೆ ವನಿತಾ, ಶಿಕ್ಷಕರು, ಸಿಬ್ಬಂದಿ ಇದ್ದರು. ವಿದ್ಯಾರ್ಥಿನಿಯರು ಭರತನಾಟ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಯುವರಾಣಿ ಕಾರ್ಯಕ್ರಮ ನಿರೂಪಿಸಿದರು.
 

Share This Article

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…

ಹಾಗಲಕಾಯಿಯಲ್ಲಿನ ಕಹಿ ತೆಗೆಯುವುದೇಗೆ ಎಂದು ಆಲೋಚಿಸುತ್ತಿದ್ದೀರಾ; ನಿಮಗಾಗಿ ಈ ಸಿಂಪಲ್​ ಟ್ರಿಕ್ಸ್​ ​ | Health Tips

ಚಳಿಗಾಲದಲ್ಲಿ ಮಂಜಿನಿಂದಾಗಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ಇದರಿಂದ ಜನರು ಹಾಗಲಕಾಯಿಯ ರುಚಿ ನೋಡುವುದಿಲ್ಲ. ಏಕೆಂದರೆ…