ದೇಶ ಸೇವೆಯಿಂದ ರಾಷ್ಟ್ರಾಭಿಮಾನ ಹೆಚ್ಚಳ

ಭಾಲ್ಕ: ಪ್ರತಿಯೊಬ್ಬರೂ ದೇಶ ಸೇವೆ ಮಾಡುವ ಮೂಲಕ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಎಂ.ಆರ್.ಎ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ರಾಜೋಳೆ ಹೇಳಿದರು.

ಶಾಹು ನಗರದಲ್ಲಿರುವ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ಛತ್ರಪತಿ ಶಿವಾಜಿ ಪದವಿ ಕಾಲೇಜು ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ವಾಷರ್ಿಕ ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, ರಾಷ್ಟ್ರ ಸೇವೆಗಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ. ಸಹಕಾರ, ಪರೋಪಕಾರ ಗುಣಗಳು ಬೆಳೆಯಲು ಶಿಬಿರಗಳು ಅಗತ್ಯವಾಗಿದೆ ಎಂದರು.

ಶಿವಾಜಿ ಕಾಲೇಜಿನ ಪ್ರಾಚಾರ್ಯ ಶಾಮರಾವ ಕಾದೇಪುರೆ ಮಾತನಾಡಿ, ಸೇವೆಯಿದ್ದಲ್ಲಿ ಮೇವಾ ಇರುತ್ತದೆ. ಏಳು ದಿವಸ ನಡೆಯುವ ಶಿಬಿರದಲ್ಲಿ ಶಿಬಿರಾರ್ಥಿ ಶಿಸ್ತು ಮತ್ತು ಸಂಯಮದಿಂದ ವತರ್ಿಸಬೇಕು ಎಂದು ತಿಳಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಗೋವಿಂದರಾವ ತಾಮಗೋಳೆ ಮಾತನಾಡಿದರು. ದೈಹಿಕ ಶಿಕ್ಷಕ ದೇವಿಂದ್ರ ಶೇರಿಕಾರ ಶಿಬಿರದ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಪ್ರೊ.ಬಿ.ಎಸ್.ಬೋರೋಳೆ, ಪ್ರೊ.ಅಶೋಕ ಭಂಡಾರಿ, ಪ್ರೊ.ಜೈಹಿಂದ ಬಿರಾದಾರ, ಡಾ.ರತ್ನದೀಪ ಶೇರಿಕಾರ, ಛಬಿತಾ ಕದಮ, ಪ್ರೊ.ಪಂಢರಿ ಪಾಟೀಲ್ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಎನ್ಎಸ್ಎಸ್ ಅಧಿಕಾರಿ ಬಾಲಾಜಿ ತಾಡಮಲ್ಲೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಬಿರಾರ್ಥಿ ಪೂಜಾ ನಿರೂಪಣೆ ಮಾಡಿದರು. ಡಾ.ಆಶಾ ಮುದಾಳೆ ವಂದಿಸಿದರು.