ಕಲಬುರಗಿ: ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಮರು ಆರಂಭವಾಗಿದ್ದು, ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಶನಿವಾರ ಗ್ರಾಮ ವಾಸ್ತವ್ಯ ಮಾಡಿದರು.
ಹಳ್ಳಿಗೆ ಪಕ್ಕಾ ದೇಶಿ ಉಡುಪಿನಲ್ಲಿ ಆಗಮಿಸುವ ಮೂಲಕ ಜಿಲ್ಲಾಧಿಕಾರಿ ಗುರುಕರ್ ಗಮನಸೆಳೆದರು. ಬಿಳಿ ಶರ್ಟ್, ಬಿಳಿ ಧೋತಿ, ಹಸಿರು ಶಾಲು, ಕೆಂಪು ರುಮಾಲು ಧರಿಸಿಕೊಂಡು ಭರ್ಜರಿ ಮಿಂಚಿದರು. ಗ್ರಾಮಸ್ಥರು ಡಿಸಿ ಸಾಹೇಬರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.
ಗ್ರಾಮದ ಗಡಿಯಿಂದ ಕಾರ್ಯಕ್ರಮದ ವೇದಿಕೆವರೆಗೂ ಎತ್ತಿನ ಬಂಡಿಯನ್ನು ಅದ್ದೂರಿ ಸ್ವಾಗತ ಮಾಡಲಾಯಿತು. ವಿವಿಧ ವಾದ್ಯಗಳು ಗಮನ ಸೆಳೆದವು. ಹಳ್ಳಿಯ ನಾರಿಯರು ಡಿಸಿ ಅವರಿಗೆ ಸಂಪ್ರದಾಯದ ಪ್ರಕಾರ ಆರತಿ ಬೆಳಗಿದರು.
ReplyForward |