ದೇಶಭಕ್ತರ ಭಾವಚಿತ್ರಗಳ ಬಾವುಟದ ಮೆರವಣೆಗೆ

ಧಾರವಾಡ: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ದೇಶಭಕ್ತರ ಭಾವಚಿತ್ರಗಳಿದ್ದ 1. ಕಿಮೀ. ಉದ್ದದ ಬಾವುಟದ ಮೆರವಣೆಗೆಯನ್ನು ನಗರದಲ್ಲಿ ಮಂಗಳವಾರ ನಡೆಸಲಾಯಿತು.

ನಗರದ ಕಲಾಭವನ ಆವರಣದಲ್ಲಿ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮೀಜಿ ಬಾವುಟದ ಮೆರವಣಿಗೆಗೆ ಚಾಲನೆ ನೀಡಿದರು. ‘ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸರ್ವ

ಧರ್ಮಗಳ ಜನರನ್ನು ಒಗ್ಗೂಡಿಸಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದರು.

ಅಂಜುಮನ್ ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಲ್ ತಮಟಗಾರ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ ಗೋಕಾಕ, ಬಸವರಾಜ ಮಲಕಾರಿ, ರಮೇಶ ಛಬ್ಬಿ ನೇತೃತ್ವದಲ್ಲಿ ನಡೆದ ಈ ಮೆರವಣೆಯಲ್ಲಿ ಜಗದೀಶ ಗೋಕಾಕ, ಪ್ರವೀಣ ಗೋಕಾವಿ, ರವಿ ರಾಣಿ, ಸಂದೀಶ ಪಾಟೀಲ, ನಿಂಗಪ್ಪ ಬಡಕುರಿ, ಈರಣ್ಣ ತೇಗೂರ ಭಾಗವಹಿಸಿದ್ದರು. ಸರ್ವಧರ್ವಿುಯ ಅಂದಾಜು 400ಕ್ಕೂ ಹೆಚ್ಚು ಯುವಕರು, ವಿದ್ಯಾರ್ಥಿಗಳು ಬಾವುಟವನ್ನು ಹೆಗಲ ಮೇಲೆ ಹೊತ್ತು ಮೆರವಣೆಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.