More

  ದೇಶದ ಸಂಸ್ಕೃತಿ ಜಗದ್ವಿಖ್ಯಾತ

  ಉಳ್ಳಾಗಡ್ಡಿ-ಖಾನಾಪುರ: ನಮ್ಮ ದೇಶ ಮೂಢನಂಬಿಕೆಗಳ ದೇಶವಲ್ಲ ಮೂಲ ನಂಬಿಕೆಗಳ ದೇಶವಾಗಿದೆ. ಇಂದು ಭಾರತೀಯ ಸಂಸ್ಕೃತಿಯನ್ನು ವಿದೇಶಿಗರು ಅಧ್ಯಯನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಹೇಳಿದರು.

  ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿ, ರಾಹುಲ ಗಾಂಧಿ ಭಾರತ ಜೋಡೋ ಕೆಲಸ ಮಾಡುತ್ತಿಲ್ಲ. ಭಾರತ ತೋಡೋ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದರು. ಸಮಾಜ ವಿರೋಧಿಯಂತೆ ಶಾಸಕ ಸತೀಶ ಜಾರಕಿಹೊಳಿ ಒಳ ಒಪ್ಪಂದ ಮಾಡಿಕೊಳ್ಳುವಲ್ಲಿ ನಿಪುಣರಾಗಿದ್ದಾರೆ. ತಾಕತ್ತಿದ್ದರೆ ಅವರು ಹಿಂದುಗಳ ಮತ ಬೇಡವೆಂದು ಚುನಾವಣೆಗೆ ಮೊದಲೇ ಹೇಳಿ ಬಿಡಲಿ. ಆಗ ಸಮಾಜವೇ ಅವರಿಗೆ ತಕ್ಕ ಪಾಠ ಕಲಿಸುತ್ತದೆ. ಆದರೆ ಈ ಬಾರಿ ಅವರನ್ನು ಚುನಾವಣೆಯಲ್ಲಿ ಮನೆಗೆ ಕಳುಹಿಸಿಯೇ ಕೊಡುತ್ತೇವೆ. ಕ್ಷೇತ್ರದಲ್ಲಿ ಗೂಂಡಾಗಿರಿ ರಾಜಕಾರಣ ಮಾಡುತ್ತಿರುವ ಶಾಸಕರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. 15 ವರ್ಷಗಳಿಂದ ಯಮಕನಮರಡಿ ಕ್ಷೇತ್ರದಲ್ಲಿ ಅಭಿವದ್ದಿ ಕಾರ್ಯ ನಡೆಯುತ್ತಿಲ್ಲ. ಬಿಜೆಪಿ ಬಂದ ನಂತರ ಶಾಂತಿ ನೆಲೆಸಿದೆ. ಕಾಂಗ್ರೆಸ್ ಅವಧಿಯಲ್ಲಿ ದೇಶ ಹಾವಾಡಿಗರ ಭಿಕ್ಷುಕರ ಎನಿಸಿಕೊಂಡಿತು.್ತ ಕಾಂಗ್ರೆಸ್ ಕಾಶ್ಮೀರ ಮತ್ತು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಮನಸ್ಸು ಮಾಡಲಿಲ್ಲ. ಆದರೆ ಬಿಜೆಪಿ ಕಾಶ್ಮೀರದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಶಾಂತಿ ನೆಲೆಸುವಂತೆ ಮಾಡಿದೆ ಎಂದು ಪ್ರಶಂಸಿಕೊಂಡರು.

  ಈಗ ಸಿದ್ದರಾಮಯ್ಯನವರಿಗೆ ಯಾವ ಕ್ಷೇತ್ರದಲ್ಲೂ ನಿಲ್ಲುವ ತಾಕತ್ತಿಲ್ಲ. ಸದಾ ಕ್ಷೇತ್ರ ಹುಡುಕುವ ಕಾರ್ಯದಲ್ಲೇ ನಿರತರಾಗಿರುತ್ತಾರೆ. ಈಗ ಅಧಿಕಾರ ಕಳೆದುಕೊಂಡ ಹುಚ್ಚರಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆಯಲು ಮೂರು ಗುಂಪುಗಳು ರಚನೆಯಾಗಿವೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಈ ಬಾರಿ ಸತೀಶ ಮಾಜಿಯಾಗಲಿದ್ದಾರೆ ಎಂದು ವ್ಯಂಗ್ಯವಾಡಿದರು.
  ಗ್ರಾಮದೇವತೆ ಲಕ್ಷ್ಮೀ ದೇವಿಯ ದರ್ಶನ ಪಡೆದು ಬೂತ್ ವಿಜಯ ಅಭಿಯಾನ ಹಾಗೂ ವಿಜಯ ಸಂಕಲ್ಪ ಯಾತ್ರೆಯ ಭಿತ್ತಿ ಪತ್ರ ಹಂಚುವ ಮೂಲಕ ಚಾಲನೆ ನೀಡಿದರು.

  See also  ಅಂತಾರಾಷ್ಟ್ರೀಯ ದಿಯಾನಿ ವಜ್ರಾಭರಣ ಪ್ರದರ್ಶನಕ್ಕೆ ಚಾಲನೆ

  ಮಾಜಿ ಸಚಿವ ಶಶಿಕಾಂತ ನಾಯಿಕ, ಡಾ.ರಾಜೇಶ ನೇರ್ಲಿ ಮಾತನಾಡಿದರು. ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಠಗಿ, ಎಸ್‌ಟಿ ಮೋರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಜಿಲ್ಲಾ ಪ್ರಭಾರಿ ಉಜ್ವಲಾ ಬಡವನಾಚೆ. ಶ್ರೀಶೈಲ ಮಠಪತಿ, ಅಪ್ಪಯ್ಯ ಜಾಜರಿ, ಅಮರ ಮಹಾಜನಶೆಟ್ಟಿ, ಶಂಕರಯ್ಯ ಗವಿಮಠ, ಸಿದ್ದಲಿಂಗ ಸಿದ್ದಗೌಡರ, ನಿಂಗಪ್ಪ ದಾಸ, ಶೇಖರಗೌಡ ಮೋದಗಿ, ಬಸರಾಜ ಪೂಜೇರಿ, ಬಸವರಾಜ ಉದೋಶಿ, ಯಲ್ಲಪ್ಪ ಗಡಕರಿ, ರಾಜು ಸಿದ್ದಗೌಡರ, ದುರದುಂಡಿ ಪಾಟೀಲ, ಗುರುಸಿದ್ದ ಪಾಯನ್ನವರ, ಮಹೇಶ ತೆಂಗಿನಕಾಯಿ, ಬಸವರಾಜ ಬರಗಾಲಿ, ಅರ್ಜುನ ಬಡಕರಿ, ರಾಜು ಮಠಪತಿ, ಈರಣ್ಣ ಗುರವ್ವ ಇತರರು ಇದ್ದರು. ಮುರುಗೇಶ ಹಿರೇಮಠ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts