ದೇಶದ ಜೀವನಾಡಿ ಅವಿಭಕ್ತ ಕುಟುಂಬ

ನರಗುಂದ: ಅವಿಭಕ್ತ ಕುಟುಂಬಗಳು ದೇಶದ ಜೀವನಾಡಿ. ವಿಭಕ್ತ ಕುಟುಂಬ ಪಾಶ್ಟಿಮಾತ್ಯರ ಸಂಸ್ಕೃತಿ. ಇಂಥ ಸಂಸ್ಕೃತಿಯನ್ನು ನಾವು ಅನುಕರಣೆ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 294ನೇ ಮಾಸಿಕ ಶಿವಾನುಭವ ಹಾಗೂ ವಿಶ್ವ ಕುಟುಂಬ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿಗೆ ಕೂಡಿ ಬಾಳುವ ಪರಂಪರೆ ಹೇಳಿಕೊಟ್ಟ ಭಾರತದಲ್ಲಿಯೇ ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಆಧುನಿಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗುತ್ತಿವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ದೂಡುವ ಸಂಸ್ಕೃತಿ ಅಳಿಸಬೇಕು. ಯುವ ಜನತೆಗೆ ಅವಿಭಕ್ತ ಕುಟುಂಬದ ಮಹತ್ವ ತಿಳಿಸಿಕೊಡಬೇಕು ಎಂದರು.

ಶಿಕ್ಷಕ ಜಿ.ಬಿ. ಕಂಠೆನ್ನವರ ಮಾತನಾಡಿ, ವಿಭಕ್ತ ಕುಟುಂಬಗಳು ದೇಶದ ಸಂಸ್ಕೃತಿ ಮತ್ತು ಅಭಿವೃದ್ಧಿಗೆ ಮಾರಕ ಎಂದರು.

ತಾಲೂಕಿನ ಕೊಣ್ಣೂರ ಗ್ರಾಮದ ಅವಿಭಕ್ತ ಕುಟುಂಬದ ಹಿರಿಯ ಸದಸ್ಯೆ ತುಳಸವ್ವ ಅನ್ನಪ್ಪಗೌಡ್ರ ಹಾಗೂ ಚಿಕ್ಕನರಗುಂದ ಗ್ರಾಮದ ಪಾರಂಪರಿಕ ಪಶು ವೈದ್ಯ ಶಿವಾನಂದ ಭಾಚಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ತಾಪಂ ಸದಸ್ಯ ಟಿ.ಬಿ. ಶಿರಿಯಪ್ಪಗೌಡ್ರ, ತಾಪಂ ಮಾಜಿ ಅಧ್ಯಕ್ಷ ಗುರಪ್ಪ ಆದೆಪ್ಪನವರ, ನಿವೃತ್ತ ಶಿಕ್ಷಕರಾದ ಪಿ.ಬಿ. ಕುಂಬಾರ, ಚಂದ್ರು ದಂಡಿನ, ಶಿಶು ಅಭಿವೃದ್ಧಿ ಇಲಾಖೆ ದ್ವಿತೀಯ ದರ್ಜೆ ಸಹಾಯಕಿ ಬಸಮ್ಮ ಹೂಲಿ, ಜಗದೀಶ ಜ್ಞಾನೋಪಂಥ, ತೀರ್ಥಗೌಡ ಪಾಟೀಲ, ತುಳಸಿಗೇರಿ ಖ್ಯಾಡದ, ಇತರರು ಉಪಸ್ಥಿತರಿದ್ದರು.

ಪ್ರೊ. ಆರ್.ಬಿ. ಚಿನಿವಾಲರ ಹಾಗೂ ಪ್ರೊ. ಆರ್.ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *