ಬ್ರಿಟಿಷರು ಭಾರತವನ್ನು ಆರ್ಥಿಕವಾಗಿ ಶೋಷಿಸಿದರೂ ದೇಶದ ಅಮೂಲ್ಯ ಪ್ರಾಚೀನ ರಚನೆಗಳನ್ನು ಸಂರಕ್ಷಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದರು ಎಂದು ಎಎಸ್‌ಐನ ನಿವೃತ್ತ ಅಧೀಕ್ಷಕ, ಪುರಾತತ್ವ ಶಾಸ್ತ್ರಜ್ಞ ಎಸ್.ಸುಬ್ಬರಾಮನ್ ಅಭಿಪ್ರಾಯಪಟ್ಟರು.
ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಭಾರತೀಯ ಜ್ಞಾನ ವ್ಯವಸ್ಥೆಗಳು’ ಕುರಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಅಂತಹ ಬೆಲೆಬಾಳುವ ವರ್ಣಚಿತ್ರಗಳನ್ನು ನಿರ್ವಹಿಸುವಲ್ಲಿ ಮನುಷ್ಯನಿಗೆ ಕೇವಲ ದ್ರಾವಕದ ಜ್ಞಾನ ಸಾಕಾಗುವುದಿಲ್ಲ. ಸಹಜವಾಗಿ ಹಸ್ತಚಾಲಿತ ಕೌಶಲ್ಯಗಳು ಹಾಗೂ ಅದೇ ಸಮಯದಲ್ಲಿ ಕಲಾತ್ಮಕ ಸಂವೇದನೆಯ ನಿರ್ದಿಷ್ಟ ಅರ್ಥವನ್ನು ಗ್ರಹಿಸುವ ಅಗತ್ಯವಿದೆ. ಅವನು ಚಿತ್ರಕಲೆಯ ಭಾವನೆ ಹೊಂದಿರಬೇಕು. ಅಮೂಲ್ಯ ಕಲಾ ವಸ್ತುಗಳೊಂದಿಗಿನ ವ್ಯವಹಾರವನ್ನು ಅವನು ತಿಳಿದಿರಬೇಕು. ಆ ಅರ್ಥದಲ್ಲಿ ಅವನು ಹತ್ತಿರವಾಗಬೇಕು ಎಂದು ವಿವರಿಸಿದರು.
ಭಾರತದ ಸಾಂಸ್ಕೃತಿಕ ಪರಂಪರೆ ಸಂರಕ್ಷಿಸುವಲ್ಲಿ ಹಲವಾರು ನಾಯಕರ ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಅಫ್ಘಾನಿಸ್ತಾನದಲ್ಲಿ ಬಮಿಯನ್ ಬುದ್ಧನ ಪ್ರತಿಮೆಗಳ ಮರುಸ್ಥಾಪನೆಯ ಸಂದರ್ಭದಲ್ಲಿ ಹಲವಾರು ಆಡೆತಡೆಗಳು ಆದರೂ ಅಲ್ಲಿ ಪ್ರತಿಮೆಗಳ ಪುನರ್ ಸ್ಥಾಪನೆಯಾಗಿ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಲು ಶುರು ಮಾಡಿದರು. ಆದರೆ ತಾಲಿಬಾನ್ ಆಡಳಿತವು ಪ್ರತಿಮೆಗಳನ್ನು ನಾಶ ಪಡಿಸಿತು ಎಂದು ತಿಳಿಸಿದರು.
ಅಜಂತಾ ಗುಹೆಗಳು, ಲೇಪಾಕ್ಷಿ ದೇವಸ್ಥಾನ, ಕಾಂಬೋಡಿಯಾದ ಅಂಕೋರ್‌ವಾಟ್ ಮತ್ತು ತಂಜಾವೂರಿನ ಬೃಹದೀಶ್ವರ ದೇವಸ್ಥಾನದ ಸಂರಕ್ಷಣೆ ಕಾರ್ಯದಲ್ಲಿ ತಾವು ಮಾಡಿದ ಕೆಲಸಗಳನ್ನು ಎಸ್.ಸುಬ್ಬರಾಮನ್ ವಿದ್ಯಾರ್ಥಿಗಳ ಮುಂದೆ ಹಂಚಿಕೊಂಡರು.
ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ವಿವಿಸಿಇ ಉಪಾಧ್ಯಕ್ಷೆ ಶೋಭಾ ಶಂಕರ್, ಗೋಪಾಲ್ ರೆಡ್ಡಿ ಮತ್ತಿತರರು ಹಾಜರಿದ್ದರು.