ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯ

ಕಮಲನಗರ : ರಾಜ್ಯದ ಮೈತ್ರಿ ಸರ್ಕಾರದಂತೆ ದೇಶದಲ್ಲಿ ಅತಂತ್ರ ಸ್ಥಿತಿ ಬೇಡ. ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿಯೇ ಮೂಲಮಂತ್ರವನ್ನಾಗಿಸಿಕೊಂಡು ದೇಶದ ಪ್ರಗತಿ, ರಕ್ಷಣೆ, ಅಖಂಡತೆಗಾಗಿ ಹಗಲಿರುಳು ದುಡಿಯುತ್ತಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಬೇಕಿದೆ. ದೇಶಕ್ಕೆ ಮೋದಿ ಅನಿವಾರ್ಯ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ಠಾಣಾಕುಶನೂರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಪ್ರಚಾರ ಸಭೆ ನಡೆಸಿ ಮಾತನಾಡಿ, ಮೋದಿ ಕೈಯಲ್ಲಿ ದೇಶ ಸುರಕ್ಷಿತವಾಗಿದೆ. ಉಗ್ರರು ಬಾಲ ಮುದುರಿಸಿಕೊಂಡು ಕೂತಿದ್ದಾರೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದರೆ ಸೇನೆಗೆ ಪ್ರತ್ಯುತ್ತರ ನೀಡುವುದಕ್ಕೆ ಅವಕಾಶವಿದ್ದಿಲ್ಲ. ಈಗ ಸ್ಥಿತಿ ಬದಲಾಗಿದೆ. ಸೇನೆಗೆ ಫುಲ್ ಪವರ್ ಸಿಕ್ಕಿದೆ. ಜನತೆ ಬಿಜೆಪಿಗೆ ಮತ ನೀಡಿ ಮೋದಿ ಮೂಲಕ ದೇಶ ಸದೃಢತೆಗೆ ಬೆಂಬಲ ನೀಡಬೇಕು ಎಂದು ಕೋರಿದರು.

ಮುಖಂಡ ಪ್ರಕಾಶ ಟೊಣ್ಣೆ ಮಾತನಾಡಿ, ಈ ಚುನಾವಣೆ ದೇಶದ ಅಭಿವೃದ್ಧಿಗಾಗಿ ಮಹತ್ವದ್ದಾಗಿದೆ. ಹಿಂದೆ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ವಿವಿಧ ಸಮುದಾಯಗಳು ಮೋದಿ ಅವರನ್ನು ಪ್ರಧಾನಿಯಾಗಿ ಮಾಡಲು ಬಿಜೆಪಿಗೆ ಸಾಥ್ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಂಡೆಪ್ಪ ಕಂಟೆ, ತಾಲೂಕು ಅಧ್ಯಕ್ಷ ಸತೀಶ ಪಾಟೀಲ್, ಪ್ರಧಾನ ಕಾರ್ಯದಶರ್ಿ ನಾಗೇಶ ಪತ್ರೆ, ಅಶೋಕ ಅಲ್ಮಾಜೆ, ಸುರೇಶ ಭೋಸ್ಲೆ, ಅರಹಂತ ಸಾವಳೆ, ರಾಮಶೆಟ್ಟಿ ಪನ್ನಾಳೆ, ಉಮೇಶ ಜೀಗರ್ೆ, ಪ್ರಕಾಶ ಅಲ್ಮಾಜೆ, ಶಿವಕುಮಾರ ಸಜ್ಜನಶೆಟ್ಟಿ, ಬಾಬುರಾವ ವಾಘಮಾರೆ, ವೀರೇಂದ್ರ ರಾಜಾಪುರೆ ಇತರರಿದ್ದರು