ದೇಶಕ್ಕಾಗಿ ಆರ್​ಎಸ್​ಎಸ್ ಶ್ರಮ

ನರಗುಂದ: ದೇಶದಲ್ಲಿ 1952 ರಿಂದ ನಡೆದ ಎಲ್ಲ ಚುನಾವಣೆಗಳಲ್ಲಿಯೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಸಕ್ರಿಯವಾಗಿ ಪಾಲ್ಗೊಂಡು ದೇಶದ ಭದ್ರತೆ ಮತ್ತು ಧರ್ಮ, ಸಂಸ್ಕೃತಿ ರಕ್ಷಣೆಗಾಗಿ ಶ್ರಮಿಸುತ್ತಿದೆ ಎಂದು ಧಾರವಾಡ ವಿಭಾಗೀಯ ಆರ್​ಎಸ್​ಎಸ್ ಪ್ರಾಂತ ಸಂಚಾಲಕ ವಿಜಯ ಮಹಾಂತೇಶ ಹೇಳಿದರು.

ಲೋಕಸಭೆ ಚುನಾವಣೆ ಅಂಗವಾಗಿ ಪಟ್ಟಣದ ಆರೂಢ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನರಗುಂದ ಮತಕ್ಷೇತ್ರದ ಬಿಜೆಪಿ ಬೂತ್​ವುಟ್ಟದ ಮತ್ತು ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚಂದ್ರು ದಂಡಿನ, ರವಿ ದಂಡಿನ, ಅಶೋಕ ಕುಲಕರ್ಣಿ, ಶಂಕರಗೌಡ ಪಾಟೀಲ, ಶ್ರೀನಿವಾಸ ಗುಜಮಾಗಡಿ, ಚಂದ್ರು ಹುಣಸೀಕಟ್ಟಿ, ಸುನಿಲಕುಮಾರ, ಅಶೋಕ ಹೆಬ್ಬಳ್ಳಿ, ಎಂ.ಎಸ್. ಪಾಟೀಲ, ವಂಸತ ಮೇಟಿ, ಬಿ.ಬಿ. ಐನಾಪುರ, ಶಾರದಾ ಜವಳಿ, ಜಿ.ಬಿ. ಕುಲಕರ್ಣಿ, ಎಸ್.ಆರ್. ಹಿರೇಮಠ, ಸಿದ್ಧೇಶ ಹೂಗಾರ, ಎಂ.ಐ. ಮೇಟಿ, ಹನುಮಂತ ಹದಗಲ್, ಚಂದ್ರು ಪವಾರ, ವಿ.ಎಸ್. ಢಾಣೆ, ಶಿವಕುಮಾರ ನೀಲಗುಂದ, ಅಣ್ಣಪ್ಪ ತಿಮ್ಮಾಪುರ, ವೀರಮ್ಮ ಜ್ಞಾನೋಪಂತ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಅಜ್ಜುಗೌಡ ಪಾಟೀಲ ನಿರ್ವಹಿಸಿದರು.

ವೇದಿಕೆಗೆ ಆಗಮಿಸಿದ ವಿದ್ಯಾಧರ ಮಹಾರಾಜರು

ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯ ವೇದಿಕೆಗೆ ಮಧುರೈನ ವಿದ್ಯಾಧರ ಮಹಾರಾಜರು ಆಕಸ್ಮಿಕವಾಗಿ ಆಗಮಿಸಿದರು. ಶಾಸಕ ಸಿ.ಸಿ. ಪಾಟೀಲ ಅವರೊಂದಿಗೆ ಕೆಲಕಾಲ ರ್ಚಚಿಸಿ ವೇದಿಕೆಯಿಂದ ನಿರ್ಗಮಿಸಿದರು.

Leave a Reply

Your email address will not be published. Required fields are marked *