ದೇವೇಗೌಡರ ಪಾದಕ್ಕೆ ಶಿವಮೊಗ್ಗ

ಶಿವಮೊಗ್ಗ: ಸೇಲ್ ಆದ್ರೂ ಮಾಡ್ಕೊಳ್ಳಿ, ಹರಾಜಾದ್ರೂ ಮಾಡ್ಕೊಳ್ಳಿ ಎಂದು ಕಾಂಗ್ರೆಸ್ ನಾಯಕರು ಶಿವಮೊಗ್ಗ ಕ್ಷೇತ್ರವನ್ನು ದೇವೇಗೌಡರ ಪಾದಕ್ಕೆ ಸಮರ್ಪಿಸಿದ್ದಾರೆ ಎಂದು ಶಾಸಕ ಕುಮಾರ ಬಂಗಾರಪ್ಪ ಗೇಲಿ ಮಾಡಿದ್ದಾರೆ.

ಕುಬಟೂರಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30-40 ವರ್ಷಗಳಿಂದ ಅಡಿಪಾಯ ಹಾಕಿ ಪಕ್ಷ ಕಟ್ಟಿದವರು ಶಿವಮೊಗ್ಗ ಜಿಲ್ಲೆಯಲ್ಲಿದ್ದಾರೆ. ಮೂರ್ನಾಲ್ಕು ದಿನದ ಹಿಂದೆ ಬಂದವರಿಂದ ಏನೂ ಆಗುವುದಿಲ್ಲ ಎಂದು ಹೇಳಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪ್ಯಾಕೇಜ್ ಪ್ರೋಗ್ರಾಂ ರೆಡಿ ಮಾಡಿಟ್ಟುಕೊಂಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ವಿದೇಶಕ್ಕೆ ಹಾರುತ್ತಾರೆ ಎಂದು ವ್ಯಂಗ್ಯವಾಡಿದರು.

ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಅನೇಕ ಶಾಸಕರು ಮೈತ್ರಿ ಸರ್ಕಾರದ ಆಡಳಿತದಿಂದ ಬೇಸತ್ತು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ಯಾವ ಕಾರಣಕ್ಕೂ ಮೈತ್ರಿಕೂಟದ ಶಾಸಕರನ್ನು ಸೆಳೆಯಲು ಪ್ರಯತ್ನಿಸುವುದಿಲ್ಲ. ಆಂತರಿಕ ಸಂಘರ್ಷದಿಂದಲೇ ಸರ್ಕಾರ ಪತನವಾಗಲಿದೆ ಎಂದರು.

Leave a Reply

Your email address will not be published. Required fields are marked *