ದೇವಾಲಯ ನೆಲಸಮ, ಮುತಾಲಿಕ್ ಆಕ್ರೋಶ

ಧಾರವಾಡ: ತಾಲೂಕಿನ ಕ್ಯಾರಕೊಪ್ಪ ಗ್ರಾಮದ ನವೋದಯ ಶಾಲೆ ಜಾಗದಲ್ಲಿನ ಶಿವನ ದೇವಸ್ಥಾನವನ್ನು ಅಧಿಕಾರಿಗಳು ಗುರುವಾರ ತೆರವುಗೊಳಿಸಿರುವುದಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆ ಜಾಗದಲ್ಲಿ ಅಘೊರಿ ಒಬ್ಬರು ಸುಮಾರು 3 ವರ್ಷಗಳ ಹಿಂದೆ ಶಿವನ ದೇವಾಲಯ ನಿರ್ವಿುಸಿದ್ದರು. ಈ ದೇವಾಲಯಕ್ಕೆ ಪ್ರತಿ ವರ್ಷ ಅಘೊರಿಗಳು ಬಂದು ಹೋಗುತ್ತಿದ್ದರು. ಆದರೆ,ಕೆಲ ದಿನಗಳಿಂದ ನವೋದಯ ಶಾಲೆ ಆಡಳಿತ ಮಂಡಳಿ ದೇವಾಲಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿತ್ತು. ದೂರಿನ ಅನ್ವಯ ಅಘೊರಿಗಳಿಗೆ ಕಾಲಾವಕಾಶವನ್ನೂ ನೀಡದೆ ಕೆಲ ಅಧಿಕಾರಿಗಳು ಆಗಮಿಸಿ ಏಕಾಏಕಿ ದೇವಾಲಯ ನೆಲಸಮಗೊಳಿಸಿದ್ದಾರೆ. ಬೇರೆ ಬೇರೆ ಧರ್ಮದ ಮಂದಿರಗಳು ಸರ್ಕಾರಿ ಜಾಗದಲ್ಲಿದ್ದರೂ ಅವುಗಳನ್ನು ತೆರವು ಮಾಡುವ ಧೈರ್ಯ ತೋರಿಸುವುದಿಲ್ಲ. ಆದರೆ ಶಿವನ ದೇವಾಲಯವನ್ನು ತೆರವು ಮಾಡಿದ್ದಾರೆ. ಹೀಗಾಗಿ ಅದೇ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ನಾವೇ ಕಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…