ಬಾಗೂರು: ದೇವಾಲಯಗಳ ನಿರ್ಮಾಣ ಹೋಮ, ಹವನಗಳನ್ನು ಹೆಚ್ಚು ಮಾಡುವುದರಿಂದ ಭಕ್ತಿ-ಭಾವ ಹೆಚ್ಚಾಗಿ ಹಳ್ಳಿಗಳಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಬಿ. ಚೌಡೇನಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀಬಸವೇಶ್ವರ ಸ್ವಾಮಿ ನೂತನ ದೇಗುಲ ಲೋಕಾರ್ಪಣೆಯ ಪೂರ್ಣಾಹುತಿ ಹೋಮದ ಧಾರ್ಮಿಕ ಸಮಾರಂಭದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಹಳ್ಳಿಗಳ ಅಭಿವೃದ್ಧಿಗೆ ಜಾತಿ ಭೇದ, ದ್ವೇಷ ಅಸೂಯೆ ಬೇಕಾಗಿಲ್ಲ. ಎಲ್ಲ ಒಂದೇ ಎಂಬ ಭಾವನೆಯಿಂದ ಒಗ್ಗಟ್ಟಾಗಿ ಹಳ್ಳಿಗಳ ಅಭಿವೃದ್ಧಿಗೆ ಒಂದಾಗಬೇಕು. ಇದರಿಂದ ಮನುಷ್ಯನ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದರು.
ನೂತನ ದೇವಾಲಯಕ್ಕೆ ರಸ್ತೆ, ಶ್ರೀ ಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ವಿಧಾನ ಪರಿಷತ್ ಸದಸ್ಯರು 10 ಲಕ್ಷ ರೂ. ಅನುದಾನ ಕೊಡಿಸುವ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸುಮಿತ್ರಾ, ಮುಖಂಡರಾದ ಬಿ.ಎಚ್. ಶಿವಣ್ಣ, ಎನ್. ಬಸವರಾಜ್, ಪುಟ್ಟಸ್ವಾಮಿ, ಮಿಲ್ಟ್ರಿ ಮಂಜುನಾಥ್, ಚಂದ್ರಣ್ಣ, ಸಿ.ಎಂ. ದಿಲೀಪ್, ರಾಜು, ರಘು, ಪ್ರವೀಣ್‌ಗೌಡ ಇತರರು ಹಾಜರಿದ್ದರು.