More

  ದೇವಾಲಯಗಳಲ್ಲಿ ಸರಣಿ ಕಳ್ಳತನ

  ಸಾಗರ: ಸಾಗರ ಅಗ್ರಹಾರದ ಮೂರು ದೇವಸ್ಥಾನಗಳಲ್ಲಿ ನಿನ್ನೆ ಸಂಜೆ ಹುಂಡಿ ಒಡೆದು ಹಣ ಲಪಟಾಯಿಸಿದ ಪ್ರಕರಣ ನಡೆದಿದೆ. ನವಾಯತ್ ಕಾಲೊನಿಯ ಮೀನು ವ್ಯಾಪಾರಿ ಅಬ್ದುಲ್ ಶಕೂರ್ ಅವರ ಮನೆಯಲ್ಲಿ ನಿನ್ನೆ ರಾತ್ರಿ ಸರಣಿ ಕಳ್ಳತನ ನಡೆದಿದ್ದು ದೂರು ದಾಖಲಾಗಿದೆ.

  ಪೊಲೀಸ್ ಮೂಲಗಳ ಪ್ರಕಾರ ಈ ಮೂರೂ ದೇವಾಲಯಗಳಲ್ಲಿ ಸುಮಾರು ಸಂಜೆ 7 ಗಂಟೆ ಸಂದರ್ಭದಲ್ಲಿ ಹುಂಡಿ ಒಡೆದು ಕಳ್ಳರು ಹಣ ಲಪಟಾಯಿಸಿದ್ದು ಸಂಕ್ರಾಂತಿ ಹಬ್ಬದಂದೇ ಕಳ್ಳತನ ನಡೆದಿರುವುದು ಅಚ್ಚರಿ ಮೂಡಿಸಿದೆ.

  ಸಂಜೆಯ ವೇಳೆಗೆ ಶಕೂರ್ ಅವರು ಒಬ್ಬರೇ ಮನೆಯಲ್ಲಿದ್ದುದನ್ನು ಗಮನಿಸಿದ ಕಳ್ಳರು ಸಂಜೆ ನಮಾಜ್​ಗಾಗಿ ಶಕೂರ್ ಅವರು ಮಸೀದಿಗೆ ತೆರಳಿದಾಗ ಮನೆಯಲ್ಲಿದ್ದ ಲಕ್ಷಾಂತರ ಬೆಲೆ ಬಾಳುವ ಆಭರಣ ಮತ್ತು ಹಣ ಕದ್ದು ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ಪಟ್ಟಣ ಠಾಣೆ ಇನ್ಸ್​ಪೆಕ್ಟರ್ ಮಹಾಬಲೇಶ್ವರ, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಎರಡೂ ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಪ್ರತ್ಯೇಕ ದೂರುಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts