ಗುರುಮಠಕಲ್: ದೇವಸ್ಥಾನಗಳು ನೆಮ್ಮದಿ ಕೊಡುವ ತಾಣಗಳಾಗಿದ್ದು, ಇಂತಹ ಹಳೇ ದೇವಸ್ಥಾನಗಳನ್ನು ಜೀರ್ಣೋದ್ಧಾರ ಕಾರ್ಯಕ್ಕೆ ಯುವಕರು ಮುಂದಾದಾಗ ಮಾತ್ರ ಇತಿಹಾಸವುಳ್ಳ ಪುರಾತನ ದೇವಸ್ಥಾನಗಳು ಮರು ಜೀವ ಪಡೆಯಲು ಸಾಧ್ಯ ಎಂದು ಪುರಸಭೆ ಸದಸ್ಯ ನವಾಜರೆಡ್ಡಿ ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ನಾರಾಯಣಪುರ ಬಡಾವಣೆಯ ಶತಮಾನ ಕಂಡ ಪುರಾತನ ದೇವಾಲಯದ ಛಾವಣಿ, ನೆಲಹಾಸು, ಕೊಠಡಿ ಸೇರಿ ಅನೇಕ ದುರಸ್ತಿ ಕಾರ್ಯ ಮಾಡಿ ಲೋಕಾರ್ಪಣೆ ಕರ‍್ಯಕ್ಮರದಲ್ಲಿ ಮಾತನಾಡಿದದರು.
ಬಸವೇಶ್ವರ ಹಾಗೂ ಈಶ್ವರ ಮೂರ್ತಿಗಳಿಗೆ ಕಂತಿ ಕೂಡಿಸಿ ಪುನಃರುಜ್ಜಿವನ ಹಾಗೂ ಪುನಃಸ್ಥಾಪನೆಗೈದು ರಚನೆಯ ಮೂಲ ಸ್ವರೂಪ ಸಂರಕ್ಷಿಸಲಾಗಿದೆ ಎಂದು ಅರ್ಚಕ ಪ್ರಭುಸ್ವಾಮಿ ಪಸ್ಪುಲ್ ತಿಳಿಸಿದರು. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಶಾಂತಿ ಪೂಜೆ, ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಅದ್ದೂರಿಯಾಗಿ ನಡೆದರು.