ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಲುಗೋಡು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ನಿಧಿ ಆಸೆಗಾಗಿ ಗರ್ಭಗುಡಿ ಮುಂದಿನ ಪ್ರಾಂಗಣವನ್ನು ದುಷ್ಕರ್ಮಿಗಳು ಅಗೆದಿದ್ದಾರೆ. ಗುರುವಾರ ಮಧ್ಯರಾತ್ರಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಈ ದೇಗುಲ 12ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಕಳೆದ ವರ್ಷವೂ ಇದೇ ಸ್ಥಳವನ್ನು ಅಗೆದು ಅರೆಬರೆ ಮುಚ್ಚಲಾಗಿತ್ತು. ಸ್ಥಳಕ್ಕೆ ತಂಬ್ರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.