ದೇವರ ಎತ್ತು,ಬಿಡಾಡಿ ದನಗಳಿಗೆ ಲಸಿಕೆಗೆ ಡಿಸಿ ಸೂಚನೆ

blank

ಚಿತ್ರದುರ್ಗ: ಜಿಲ್ಲಾದ್ಯಂತ ಅ.21ರಿಂದ ನವೆಂಬರ್ 20ರವರೆಗೆ ನಡೆಯಲಿರುವ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ಮ ನೆ,ಮನೆಗಳಿಗೆ ತೆರಳಿ ಜಾನುವಾರಗಳಿಗೆ ಲಸಿಕೆ ನೀಡ ಬೇಕು.ಇವುಗಳೊಂದಿಗೆ ದೇವರ ಎತ್ತುಗಳು ಹಾಗೂ ಬಿಡಾಡಿ ದನಗಳಿಗೂ ಲಸಿಕೆ ನೀಡುವಂತೆ ಡಿಸಿ ಟಿ.ವೆಂಕಟೇಶ್ ಅಧಿಕಾರಿ ಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ,ಲಸಿಕಾ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಯಾವುದೇ ಜಾನುವಾರುಗಳು ಲಸಿಕೆಯಿಂದ ತಪ್ಪಿಸಿಕೊಳ್ಳಬಾರದು. ಶೇ.100 ಗುರಿ ತಲುಪಬೇಕು. ಲಸಿಕೆ ನೀಡಿದ ಪ್ರತಿ ಜಾನುವಾರು ಮಾಹಿತಿಯನ್ನು ತಪ್ಪದೇ ತಂತ್ರಾಂಶದಲ್ಲಿ ವರದಿ ಮಾಡ ಬೇಕೆಂದರು.
20ನೇ ಜಾನುವಾರು ಗಣತಿ ಆಧರಿಸಿ ಜಿಲ್ಲೆಯಲ್ಲಿ 3,38,907 ಜಾನುವಾರುಗಳಿವೆ ಅಂದಾಜಿಸಲಾಗಿದೆ. 6 ತಾಲೂಕುಗಳಲ್ಲಿ 991 ಗ್ರಾ ಮಗಳನ್ನು, 3390 ಬ್ಲಾಕ್‌ಗಳನ್ನಾಗಿ ಗುರುತಿಸಲಾಗಿದೆ ಎಂದು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕುಮಾರ್ ಹೇಳಿ ದರು. 291ಲಸಿಕಾದಾರರು ಮನೆಗಳಿಗೆ ತೆರಳಿ ಲಸಿಕೆ ನೀಡಲಿದ್ದಾರೆ. ಈ ಹಿಂದೆ ಜರುಗಿದ 5ನೇ ಸುತ್ತಿನ ಲಸಿಕಾ ಕಾರ‌್ಯಕ್ರಮದಲ್ಲಿ 1,89, 030 ದನಗಳು,83273 ಎಮ್ಮೆಗಳು ಸೇರಿ 2,72,303 ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು. 5ನೇ ಸುತ್ತಿನಲ್ಲಿ ಉಳಿದಿರುವ 16,350 ಡೋಸ್ ಲಸಿಕೆ ಸಹಿತ 2,89,700 ಲಸಿಕೆ ಡೋಸ್ ಸಂಗ್ರಹವಿದೆ ಎಂದರು. ಅ.28ರವರೆಗೆ ನಡೆಸುತ್ತಿರುವ ಉಚಿತ ರೇಬೀಸ್ ನಿರೋಧಕ ಲಸಿಕಾ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಯಿ, ಬೆಕ್ಕುಗಳಿಗೆ ಲಸಿಕೆ ನೀಡಬೇಕೆಂದು ಡಿಸಿ ಸೂಚಿಸಿದರು.
ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಿದರೆ ಸಂಚಾರಿ ಪಶು ಚಿಕಿತ್ಸಾಲಯದಿಂದ ಸ್ಪಂದನೆ ವಿಳಂಬವಾಗುತ್ತಿದೆ ಎಂಬ ದೂರಿದೆ. ಸಹಾಯವಾಣಿ ಮೂಲಕ ಬರುವ ಕರೆ ಹೊರತಾಗಿಯೂ ಪಶು ಚಿಕಿತ್ಸಾಲಯದ ಸಿಬ್ಬಂದಿ ನೇರವಾಗಿ ಕರೆ ಸ್ವೀಕರಿಸಿ,ತೊಂದರೆಯಲ್ಲಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡ ಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಇದೇ ಸಂದರ್ಭದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಹಾಗೂ ರೇಬಿಸ್ ರೋಗ ತಡೆ ಕುರಿತು ಭಿತ್ತಿ ಪತ್ರ ಬಿಡುಗಡೆ ಗೊ ಳಿಸಲಾಯಿತು. ಪಶುವೈದ್ಯಕೀಯ ಸೇವೆ ಇಲಾಖೆ ಪಾಲಿಕ್ಲಿನಿಕ್‌ನ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್,ಡಿಡಿ ಡಾ.ಹರೀಶ್,ಸಹಾಯಕ ನಿರ್ದೇಶಕರಾದ ಡಾ.ಕಿರಣ್, ಡಾ.ಇಂದಿರಾಬಾಯಿ,ಡಾ.ಹುಸೇನ್,ಡಾ.ರೇವಣ್ಣ,ಡಾ.ರಂಗಪ್ಪ, ಡಾ.ರಂಗಸ್ವಾಮಿ,ಡಾ.ಬೊಮ್ಮಯ್ಯ, ಕೆ ಎಂಎಫ್ ಉಪ ವ್ಯವಸ್ಥಾಪಕ ಡಾ.ಸಂಜಯ್ ಮತ್ತಿತರರು ಇದ್ದರು.

ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ
ನಗರ ಹಾಗೂ ಪಪಂ ಪ್ರದೇಶಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಮುಖ್ಯಬೀದಿಗಳಲ್ಲೇ ಜನರ ಮೇಲೆ ಬೀದಿನಾಯಿಗಳು ಆ ಕ್ರಮಣ ಮಾಡಿದ ಘಟನೆಗಳು ವರದಿಯಾಗಿವೆ. ನಗರಸಭೆ ಹಾಗೂ ಪಶು ಇಲಾಖೆ ಅಧಿಕಾರಿಗಳು, ಬೀದಿನಾಯಿಗಳ ಸಂತಾನ ನಿಯಂತ್ರ ಣಕ್ಕೆ ಸೂಕ್ತ ಕ್ರಮಕೈಗೊಳ್ಳ ಬೇಕು.
ಎಸ್.ಜೆ.ಸೋಮಶೇಖರ್,ಸಿಇಒ,ಜಿಪಂ,ಚಿತ್ರದುರ್ಗ.


Share This Article

Skin Care | ಚಳಿಗಾಲದಲ್ಲಿ ನಿಮ್ಮ ತ್ವಚೆಯು ಹಾಳಾಗದಂತೆ ಎಚ್ಚರವಹಿಸಿ; ಈ ಫೇಸ್​ಪ್ಯಾಕ್ ಟ್ರೈ ಮಾಡಿ ಫಲಿತಾಂಶ ನೀವೇ ನೋಡಿ..

ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…

ಈ ಆಹಾರ ಪದಾರ್ಥದಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ; Health Tips ನಿಮಗಾಗಿ

ಕ್ಯಾನ್ಸರ್​​ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.…

ಚಳಿಗಾಲದಲ್ಲಿ ಕೈ&ಕಾಲ್ಬೆರಳುಗಳ ಊತಕ್ಕೆ ಕಾರಣ ಈ ಕಾಯಿಲೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ… | Health Tips

ಚಳಿಗಾಲದಲ್ಲಿ ನೆಗಡಿ ಮಾತ್ರವಲ್ಲದೆ ಹಲವಾರು ಕಾಯಿಲೆಗಳು ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅದರಲ್ಲಿ ಚಿಲ್ಬ್ಲೈನ್ಸ್ ರೋಗವು ಒಂದಾಗಿದೆ. ಬಹುಶಃ…