ಸಿನಿಮಾ

ದೆಹಲಿಯಲ್ಲಿ ನೂಪುರ ತಂಡ ಕಲಾ ಪ್ರದರ್ಶನ

ಬೀದರ್: ಇಲ್ಲಿಯ ನೂಪುರ ನೃತ್ಯ ಅಕಾಡೆಮಿಯ ತಂಡವು ನವದೆಹಲಿಯಲ್ಲಿ ಇರುವ ದೆಹಲಿ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಬಸವಣ್ಣ ಹಾಗೂ ಅಕ್ಕ ಮಹಾದೇವಿ ಜಯಂತ್ಯುತ್ಸವದಲ್ಲಿ ಕಲಾ ಪ್ರದರ್ಶನ ನೀಡಿ ಗಮನ ಸೆಳೆದಿದೆ.
ಕಲಾವಿದೆ ಉಷಾ ಪ್ರಭಾಕರ್ ನೇತೃತ್ವದ ಬಸವಣ್ಣನವರ ಕರ್ಮ ಭೂಮಿಯ ತಂಡವು ಬಸವಣ್ಣ ಹಾಗೂ ಅಕ್ಕಮಹಾದೇವಿ ಅವರ ವಚನಗಳಿಗೆ ನೃತ್ಯ ರೂಪಕ, ವೈವಿಧ್ಯಮಯ ಜನಪದ ಗೀತೆಗಳ ನೃತ್ಯ ಪ್ರಸ್ತುತಪಡಿಸಿ ಸಭಿಕರ ಮನ ಗೆದ್ದಿತು. ಕರತಾಡನಕ್ಕೆ ಪಾತ್ರವಾಯಿತು.
ಬೀದರ್‍ನ ಸಹಾರ್ದ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಹಾಗೂ ಪೂಜಾ ರಾವ್ ಸಾಂಸ್ಕøತಿಕ ಕಾರ್ಯಕ್ರಮ ನಿರ್ವಹಿಸಿದರು. ಪ್ರಭಾಕರ್, ಪ್ರಫುಲ್ಲಾ, ಮಮತಾ, ಅನಿತಾ ಬಿರಾದಾರ, ತುಳಸಿಬಾಯಿ, ವೀಣಾ, ಶ್ವೇತಾ ಮೈಲೂರಕರ್, ಪವಿತ್ರಾ ಇದ್ದರು.

Latest Posts

ಲೈಫ್‌ಸ್ಟೈಲ್