ಚಿತ್ರದುರ್ಗ: ಛಲವಾದಿ ಸಮುದಾಯದವರು, ವೀರವನಿತೆಯ ಅಭಿಮಾನಿಗಳು ಒನಕೆ ಓಬವ್ವ ಮಾಲೆ ಧರಿಸಿ ಡಿ.ಎಸ್.ಹಳ್ಳಿಯಿಂದ ನಗರದ ಉಚ್ಚಂಗಿ ಯಲ್ಲಮ್ಮ ದೇವಿ ದೇಗುಲದವರೆಗೂ ಭಾನುವಾರ ಪಾದಯಾತ್ರೆ ನಡೆಸಿದರು.
ಛಲವಾದಿ ಗುರುಪೀಠ ಮತ್ತು ಮಹಾಸಭಾ, ಒನಕೆ ಓಬವ್ವ ಸಂರಕ್ಷಣಾ ಸಮಿತಿ, ಸರ್ವ ಸಮಾಜದ ಸಹಯೋಗದೊಂದಿಗೆ ನಡೆದ ಪಾದಯಾತ್ರೆಗೆ ಚಿತ್ರದುರ್ಗದಲ್ಲಿ ಭವ್ಯ ಸ್ವಾಗತ ದೊರೆಯಿತು.
ಮಾಲಾಧಾರಿಗಳ ಪೈಕಿ ಹಲವರು ರಾತ್ರಿ ದೇಗುಲದಲ್ಲಿ ತಂಗಿದ್ದು, ಸೋಮವಾರ ಮಡಿಪೂಜೆ ಮೂಲಕ ಓಬವ್ವ ಸಮಾಧಿ ಸ್ಥಳಕ್ಕೆ ತೆರಳಿದರು. ಐತಿಹಾಸಿಕ ಕೋಟೆ ಮುಂಭಾಗ ಓಬವ್ವ ಜಯಂತ್ಯುತ್ಸವ ನಡೆಯಿತು. ಇದಕ್ಕೂ ಮುನ್ನ ವೀರವನಿತೆಯ ಭಾವಚಿತ್ರ ಮೆರವಣಿಗೆಗೆ ಚಾಲನೆ ದೊರೆಯಿತು. ಕೋಟೆ ರಸ್ತೆ ಮಾರ್ಗವಾಗಿ ಸಂಚರಿಸಿತು.
ಬಸವನಾಗಿದೇವ ಶ್ರೀ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸಿದರು. ಪಾದಯಾತ್ರೆಯಲ್ಲಿ ಮಾತೆ ಮುಕ್ತಾಯಕ್ಕ, ಮಹಾಸಭಾ ಅಧ್ಯಕ್ಷ ಶೇಷಣ್ಣ, ಸಂರಕ್ಷಣಾ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ನೆಲ್ಲಿಕಟ್ಟೆ ನಾಗರಾಜು, ಡಿ.ಎಸ್.ಹಳ್ಳಿ ಜಗದೀಶ್, ವೆಂಕಟೇಶ್, ಶಶಿಕುಮಾರ್, ಆಕಾಶ್, ಶ್ರೀನಿವಾಸ್‌ಬಾಬು, ರವಿ, ನರಸಿಂಹಪ್ಪ, ಎಂ.ಕೆ.ನಟರಾಜು, ನರೇನ್‌ಹಾಳ್ ದಯಾನಂದ್, ಕುಮಾರ್ ಇತರರಿದ್ದರು.