ದುರ್ಗಾವಿನಾಯಕ ದೇವರ ಪುನಃ ಪ್ರತಿಷ್ಠಾಪನೆ

ಸಿದ್ದಾಪುರ: ತಾಲೂಕಿನ ವಾಜಗದ್ದೆಯ ನೂತನ ದೇವಾಲಯದ ಲೋಕಾರ್ಪಣೆ ಹಾಗೂ ದುರ್ಗಾವಿನಾಯಕ ದೇವರ ಪುನಃ ಪ್ರತಿಷ್ಠಾಪನಾ ಮಹೋತ್ಸವ ಏ.20 ರವೆಗೆ ನಡೆಯಲಿದ್ದು, ಗುರುವಾರ ವಿಧಿಯುಕ್ತವಾಗಿ ಧಾರ್ವಿುಕ ಕಾರ್ಯಕ್ರಮ ಆರಂಭವಾಯಿತು.

ದೇವಾಲಯದ ಅರ್ಚಕ ಶಿವರಾಮ ಗಣಪತಿ ಜೋಶಿ ವಾಜಗದ್ದೆ ಅವರ ಪೌರೋಹಿತ್ಯದಲ್ಲಿ ವೇ.ಮೂ. ಸಾಂಬ ಗಣಪತಿ ಹಿರೇಗಂಗೆ ಷಡಕ್ಷರಿ ಗೋಕರ್ಣ ಅವರ ನೇತೃತ್ವದಲ್ಲಿ ದೇವರ ಪ್ರಾರ್ಥನೆ, ಗಣಪತಿ ಪೂಜೆ, ಬ್ರಹ್ಮಕೂರ್ಚ ಹವನ, ಪಂಚಗವ್ಯ ಪ್ರಾಶನ, ಸಪ್ತ ಶುದ್ಧಿ ಗಣಪತಿ ಅಥರ್ವಶೀರ್ಷ ಪಾರಾಯಣ, ಸಪ್ತಶತಿ ಪಾರಾಯಣ ಹಾಗೂ ದುರ್ಗಾಸೂಕ್ತ ಪಾರಾಯಣ ನಡೆಯಿತು. ಗ್ರಾಮದ ಹಿರಿಯರಾದ ತಿಮ್ಮಪ್ಪ ಹೆಗಡೆ ಕಂಚಿಮನೆ ದಂಪತಿ ಪೂಜಾ ಕೈಂಕರ್ಯ ನಡೆಸಿದರು.

ಪೂರ್ಣಕುಂಭ ಸ್ವಾಗತ: ದುರ್ಗಾವಿನಾಯಕ ದೇವಸ್ಥಾನಕ್ಕೆ ಗುರುವಾರ ಸಂಜೆ ಆಗಮಿಸಿದ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಪೂರ್ಣಕುಂಭ ಹಾಗೂ ಡೊಳ್ಳುಕುಣಿತದ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.

ದೇವಾಲಯದ ಮೊಕ್ತೇಸರ ಪಿ.ವಿ. ಹೆಗಡೆ ಹೊಸಗದ್ದೆ ದಂಪತಿ ಧೂಳಿಪೂಜೆ ನೆರವೇರಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಕಟ್ಟಡ ಸಮಿತಿ ಸದಸ್ಯರು, ಗ್ರಾಮಸ್ಥರು, ಮಹಿಳಾ ಮಂಡಳ ಸದಸ್ಯರು, ಹಾರ್ಸಿಕಟ್ಟಾ ವಲಯದ ಪದಾಧಿಕಾರಿಗಳು ಸೇರಿ ನೂರಾರು ಶಿಷ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *