ಹುಕ್ಕೇರಿ, ಬೆಳಗಾವಿ: ದಿನಗೂಲಿ ಕಾರ್ಮಿಕರು ದುಡಿಮೆಯ ಹಣವನ್ನು ದುಶ್ಚಟಗಳಿಗೆ ಬಳಸಿಕೊಳ್ಳಬಾರದು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸಲಹೆ ನೀಡಿದರು. ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಹುಕ್ಕೇರಿ ತಾಲೂಕು ಅಸಂಘಟಿತ ವಲಯದ ಕಾರ್ಮಿಕರ ಸಂಘಟನೆ ಆಶ್ರಯದಲ್ಲಿ ಗುರುವಾರ 350 ಕಟ್ಟಡ ಕಾರ್ಮಿಕರಿಗೆ 1500 ರೂ.ಮೊತ್ತದ ಕಿಟ್ ವಿತರಿಸಿ ಮಾತನಾಡಿದರು. ಅಸಂಘಟಿತ ವಲಯದ ಕಾರ್ಮಿಕರು ಶ್ರಮಜೀವಿಗಳು. ಅವರು ಜೀವನ ನಿರ್ವಹಣೆಗೆ ತೊಂದರೆ ಪಡುತ್ತಾರೆ. ಅದಕ್ಕೆ ದುಶ್ಚಟ ಹಾಗೂ ದುಂದುವೆಚ್ಚಗಳೇ ಕಾರಣ ಎಂದರು.
ಕಟುಂಬದ ಸದಸ್ಯರು ನಿಮ್ಮ ದುಡಿಮೆಯ ಹಣದ ಮೇಲೆ ಅವಲಂಬಿತರಾಗಿರುತ್ತಾರೆ. ಕುಟುಂಬದ ಏಳಿಗೆಗೆ ಮತ್ತು ಮಕ್ಕಳ ಅಭಿವೃದ್ಧಿಗೆ ಕೂಲಿ ಹಣವನ್ನು ಬಳಸಿಕೊಳ್ಳಬೇಕು. ಕಷ್ಟದ ಸಂದರ್ಭಗಳಲ್ಲಿ ವೈದ್ಯಕಿಯ ವೆಚ್ಚಕ್ಕೆ ಹಣದ ಅವಶ್ಯಕತೆ ಇರುತ್ತದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಬೇಕಾದ ಸವಲತ್ತುಗಳನ್ನು ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು.
ತಾಲೂಕಿನ ಅಸಂಘಟಿತ ವಲಯ ಕಾರ್ಮಿಕರ ಸಂಘಟನೆ ಅಧ್ಯಕ್ಷ ಭೀಮಶಿ ಗೋರಖನಾಥ ಮಾತನಾಡಿದರು. ಶಿವಾನಂದ ಪಾಟೀಲ, ಅರಿಹಂತ ಸನಮಾನೆ, ರಾಜು ಕೋಳಿ, ಮಂಜುನಾಥ ಸುಣಗಾರ, ಮಾರುತಿ ಗುಟಗುದ್ದಿ, ಶಶಿಕಾಂತ ಉಪ್ಪಾರ, ಸಚಿನ ಕುಂಬಾರ, ಮಹಾನಂದ ಕಾಗಲಿ, ಕಿರಣ
ಕುರಾಡೆ, ಹಾಲಪ್ಪ ಗಡದವರ, ಗುರುನಾಥ ಹೆಗಡೆ ಇತರರು ಇದ್ದರು.