ಸಿನಿಮಾ

‘ದೀಪದ ನಡಿಗೆ ಮತದಾನದ ಕಡೆಗೆ’ ಜಾಥಾ


ಕುಶಾಲನಗರ: ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಲು ಶನಿವಾರ ಕೊಡಗು ಜಿಲ್ಲಾಡಳಿತದ ನೇತೃತ್ವದಲ್ಲಿ ‘ದೀಪದ ನಡಿಗೆ ಮತದಾನದ ಕಡೆಗೆ’ ಜಾಥಾವನ್ನು ಕುಶಾಲನಗರದ ಗಣಪತಿ ದೇವಾಲಯದ ಸಮೀಪದಲ್ಲಿ ಏರ್ಪಡಿಸಲಾಗಿತ್ತು.


ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ, ಕೊಡಗು ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಶಿಕ್ಷಕರು ದೀಪಗಳನ್ನು ಹಿಡಿದು ಮತದಾನದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು.
ಕೊಡಗು ಜಿಲ್ಲಾ ಚುನಾವಣಾ ರಾಯಭಾರಿ ಬಸವರಾಜ್ ಬಡಿಗೇರ ಹಾಡಿನ ಮೂಲಕ ಮತದಾನದ ಮಹತ್ವ ಸಾರಿದರು.


ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಂಗಧಾಮಯ್ಯ, ಇಒ ದೊಡ್ಡೇಗೌಡ, ಬಿಇಒ ಕೆ.ವಿ.ಸುರೇಶ್, ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಸೋಮಶೇಖರ್, ವೀರಾಜಪೇಟೆಯ ಸುರೇಂದ್ರ, ಡಾ.ಸದಾಶಿವ ಪಲ್ಯದ್, ಉ.ರಾ.ನಾಗೇಶ್, ವಿಜ್ಞಾನ ಪರಿಷತ್‌ನ ಮಾಜಿ ಉಪಾಧ್ಯಕ್ಷ ಮೆ.ನಾ.ವೆಂಕಟ್ ನಾಯಕ್, ಶೈಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಅಂಗವಿಕಲ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

Latest Posts

ಲೈಫ್‌ಸ್ಟೈಲ್