Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ದಿನವಿಡೀ ನಿಂತರೂ ದೊರಕದ ಪಹಣಿ ಪತ್ರ

Wednesday, 11.07.2018, 9:59 PM       No Comments

ನರಗುಂದ: ಪ್ರಸಕ್ತ ಮುಂಗಾರು ಬೆಳೆಗೆ ಫಸಲ್​ಬಿಮಾ ಯೋಜನೆಯಡಿ ಬೆಳೆವಿಮೆ ಕಂತು ಪಾವತಿಸಲು ಜು. 31ಕೊನೆ ದಿನವಾದ ಕಾರಣ ಪಹಣಿ ಪತ್ರ ಪಡೆಯಲು ರೈತರು ಮಿನಿ ವಿಧಾನಸೌಧದಲ್ಲಿ ನಿತ್ಯ ಹರಸಾಹಸ ಪಡುವಂತಾಗಿದೆ. ವಿದ್ಯುತ್ ವ್ಯತ್ಯಯ, ಸರ್ವರ್ ಸ್ಥಗಿತದಿಂದ ಜನಸ್ನೇಹಿ ಕೇಂದ್ರದದಲ್ಲಿ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಹೀಗಾಗಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಪಹಣಿಗಾಗಿ ಎಲ್ಲ ಕೆಲಸಗಳನ್ನು ಬದಿಗೊತ್ತಿ ಕಚೇರಿ ಆರಂಭಕ್ಕೂ ಮುನ್ನ ಪಾಳಿ ಹಚ್ಚುತ್ತಿದ್ದಾರೆ. ಆದರೂ ಕೆಲವರಿಗೆ ಮಾತ್ರ ಪಹಣಿ ದೊರಕುತ್ತಿರುವುದು ರೈತರಿಗೆ ತೊಂದರೆ ಉಂಟುಮಾಡಿದೆ. ಹೀಗಾಗಿ ಇನ್ನುಳಿದ ರೈತರು ಎಲ್ಲಿ ಅವಧಿ ಮುಗಿದು ಹೋಗುತ್ತದೋ ಎಂಬ ಚಿಂತೆಯಲ್ಲಿದ್ದಾರೆ. ಸಕಾಲಕ್ಕೆ ಪಹಣಿ ಪತ್ರಿಕೆ ದೊರೆಯದಿದ್ದರೆ ತಹಸೀಲ್ದಾರ್ ಕಚೇರಿ ಎದರು ಧರಣಿ ನಡೆಸುವುದಾಗಿ ರೈತರಾದ ಪುಂಡಲೀಕಪ್ಪ ಪೂಜಾರ, ಶರಣಪ್ಪ ಬಾಗೂರ, ಕರೀಂಸಾಬ ನದಾಫ್, ವಿ.ವಿ. ವಂಕಲಕುಂಟಿ, ಶಿವಾನಂದ ದಂಡಿನ ಪಂಚಪ್ಪ ರಾಮದುರ್ಗ, ಮಹಾಂತೇಶ ಮಠದ, ಎಸ್.ಕೆ. ದಂಡಾಪೂರ, ಕಾಶಮ್ಮ ಗದಿಗೆಮ್ಮನವರ, ಅಂಜಲಿ ಭರತಣ್ಣವರ, ಚಂದಮ್ಮ ಕಿರೇಸೂರ, ಕಮಲಾಕ್ಷಿ ದುತ್ತರಿ ಇತರರು ತಿಳಿಸಿದ್ದಾರೆ.

ಪಹಣಿಗಳನ್ನು ಎಲ್ಲ ಗ್ರಾಪಂನಲ್ಲಿ ನೀಡಲಾಗುತ್ತಿದೆ. ಈ ಮೊದಲು ನಿರ್ಲಕ್ಷಿಸಿ, ಬೆಳೆವಿಮೆ ಸಮಯ ಸಮೀಪ ಬಂದಾಗ ಎಲ್ಲ ರೈತರು ಒಟ್ಟಿಗೆ ಪಹಣಿ ಪತ್ರ ಪಡೆಯಲು ಆಗಮಿಸಿದ ಕಾರಣ ಸರದಿ ಸಾಲು ಕಂಡು ಬರುತ್ತಿದೆ. ಅಲ್ಲದೆ, ಕೆಲವೊಮ್ಮೆ ವಿದ್ಯುತ್, ಸರ್ವರ್ ಸಮಸ್ಯೆಯಿಂದ ವಿಳಂಬವಾಗಿದೆ. ಆದರೂ ಶೀಘ್ರದಲ್ಲಿ ಪಹಣಿ ಒದಗಿಸಲು ಸೂಚಿಸಲಾಗಿದೆ.
| ಪ್ರಕಾಶ ಹೊಳೆಪ್ಪಗೋಳ, ತಹಸೀಲ್ದಾರ್.

Leave a Reply

Your email address will not be published. Required fields are marked *

Back To Top