ಸಂಡೂರು: ರಾಜಕಾರಣಿಗಳು ಮತ್ತು ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಕಾರ್ಮಿಕರ ಕಾನೂನುಗಳನ್ನು ಕಿತ್ತಿಕೊಳ್ಳುತ್ತಿದ್ದಾರೆ ಎಂದು ಸಿಐಟಿಯು ಜಿಲ್ಲಾ ಪ್ರ.ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ ಹೇಳಿದರು.

ತೋರಣಗಲ್ ಗ್ರಾಮದ ಸೂರಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೇ.90 ದುಡಿವ ಜನರ ಬೆವರಿನ ಗಳಿಕೆಯನ್ನು ಶೇ.10 ಬಂಡವಾಳಶಾಹಿಗಳು ದೋಚುತ್ತಿದ್ದಾರೆ. ಹಲವಾರು ಕಾಯಿದೆಗಳು ಬಂದರೂ ಅಸಮಾನತೆ, ತಾರತಮ್ಯಗಳು ಜೀವಂತ ಇವೆ ಎಂದು ದೂರಿದರು.
ಒಂದು ದಿನದ ವೇತನ 600 ರೂ. ನಿಗದಿ ಮಾಡಬೇಕೆಂಬ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ ವಿತರಿಸಲಾಯಿತು. ಕಾರ್ಮಿಕರ ಆನ್‌ಲೈನ್ ಸೌಲಭ್ಯ ಕಲ್ಪಿಸುವ ಕೇಂದ್ರ ಉದ್ಘಾಟಿಸಲಾಯಿತು. ಕಾರ್ಮಿಕ ಸಂಘಟನೆ ಪ್ರಮುಖ ಎನ್.ಶಂಕಣ್ಣ ಧ್ವಜಾರೋಹಣ ನೆರವೇರಿಸಿದರು.
ಪ್ರಮುಖರಾದ ಎಂ.ಪಿ.ತಿಮ್ಮಪ್ಪ, ರಾಮಾಲಿ, ರಾಮಾಂಜನಿ, ಇಸ್ಮಾಯಿಲ್, ಹುಲುಗಪ್ಪ, ಹಾಲೇಶ್, ದೇವಣ್ಣ, ಪಾಂಡು ಇತರರಿದ್ದರು.