ದಿನಕ್ಕೆ 41.900 ಕೆಜಿ ಹಾಲು ನೀಡಿ ಒಂದು ಲಕ್ಷ ಗೆದ್ದ ಹಸು!

ಮೈಸೂರು: ಬೆಂಗಳೂರಿನ ಪಾದರಾಯನಪುರದ ಮಾರುತಿ ಡೇರಿ ಫಾರಂನ ಎಸ್.ರಿಶಿತ್ ಮತ್ತು ಲೀಶ್ ಅವರ ಹಸು ದಿನಕ್ಕೆ 41.9 ಕೆಜಿ (ಬೆಳಗ್ಗೆ 21.55 ಕೆಜಿ, ಸಂಜೆ 20.35 ಕೆಜಿ) ಹಾಲು ಕರೆವ ಮೂಲಕ 1 ಲಕ್ಷ ರೂ.,

2 ಕೆಜಿ ಬೆಳ್ಳಿ ಪಾರಿತೋಷಕ ಗಳಿಸಿತು. ತೂಗುದೀಪ ಶ್ರೀನಿವಾಸ್, ಅಂಬರೀಷ್ ಸ್ಮರಣಾರ್ಥ ಮೈಸೂರು ಗೋ ಪಾಲಕರ ಸಂಘ ಮತ್ತು ಪಶುಪಾಲನ ಇಲಾಖೆ ಸಹಯೋಗದಲ್ಲಿ ಜೆ.ಕೆ.ಮೈದಾನದಲ್ಲಿ ರಾಜ್ಯ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧಾ ಕಾರ್ಯಕ್ರಮದ ಸಮಾರೋಪದಲ್ಲಿ ನಟ ದರ್ಶನ್ ವಿಜೇತರಿಗೆ ಬಹುಮಾನ ವಿತರಿಸಿದರು. ನೆಲಮಂಗಲದ ಭಕ್ತನಪಾಳ್ಯದ ಚಂದನ್ ಮುನಿರಾಜು ಅವರ ಹಸು 40.900 ಕೆಜಿ ಹಾಲು ನೀಡಿ 2ನೇ, ರಾಜಾಜಿನಗರದ ಜಗನ್ನಾಥ್ ಕೌಶಿಕ್ ಡೇರಿ ಫಾರಂನ ಹಸು 40.700 ಕೆಜಿ ಹಾಲು ನೀಡಿ 3ನೇ ಪ್ರಶಸ್ತಿ ಪಡೆದವು.